Ad Widget .

ದೆಹಲಿಯಲ್ಲಿ ಮನೆಬಾಗಿಲಿಗೆ ಆಕ್ಸಿಜನ್ ಬ್ಯಾಂಕ್: ಕೇಜ್ರಿವಾಲ್

ನವದೆಹಲಿ: ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಉತ್ತೇಜನ ನೀಡಲು ದೆಹಲಿಯ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹೋಂ ಐಸೋಲೇಶನ್ ನಲ್ಲಿರುವು ಕೋವಿಡ್ ಸೋಂಕಿತರು ಈ ಆಮ್ಲಜನಕ ಸಾಂದ್ರಕಗಳನ್ನು ತಮ್ಮ ಮನೆಗೆ ತಲುಪಿಸಲು ಕೇಳಬಹುದು.
ಇಂದಿನಿಂದ ಈ ಸೇವೆಯನ್ನು ಪ್ರಾರಂಭಿಸಿದ್ದು, ಪ್ರತಿ ಜಿಲ್ಲೆಯಲ್ಲೂ 200 ಆಮ್ಲಜನಕ ಸಿಲಿಂಡರ್ ಗಳನ್ನು ಹೊಂದಿರುವ ಬ್ಯಾಂಕ್ ಇರುತ್ತದೆ. ಕೋವಿಡ್ ರೋಗಿಗಳು ಅಗತ್ಯವಿದ್ದಾಗ ಆಮ್ಲಜನಕ ಸಿಗದ ಕಾರಣ ಹೆಚ್ಚಾಗಿ ಐಸಿಯುಗಳಿಗೆ ಪ್ರವೇಶ ಪಡೆಯುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಸೇವೆ ಪ್ರಾರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ.

Ad Widget . Ad Widget .

ಸಾಮಾಜಿಕ ಅಂತರವನ್ನು ಕಾಪಾಡಲು ಈ ಕ್ರಮ ಅನುಕೂಲವಾಗಿದ್ದು, ಮನೆಯಲ್ಲಿಯೇ ಸೋಂಕಿತರು ಚಿಕಿತ್ಸೆ ಪಡೆಯಲು ಸಾಧ್ಯ “ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಯಾವುದೇ ರೋಗಿಗೆ ವೈದ್ಯಕೀಯ ಆಮ್ಲಜನಕ ಅಗತ್ಯವಿದ್ದರೆ, ನಮ್ಮ ತಂಡಗಳು ಎರಡು ಗಂಟೆಗಳಲ್ಲಿ ಅವರ ಮನೆ ಬಾಗಿಲಿಗೆ ಇರುತ್ತವೆ. ಪರಿಣತಿ ಹೊಂದಿದ ಆರೋಗ್ಯ ಸಿಬ್ಬಂದಿ ರೋಗಿಗೆ ಸಹಾಯ ಮಾಡುತ್ತಾನೆ. ಆಸ್ಪತ್ರೆಗಳಿಂದ ಬಿಡುಗಡೆಯಾದ ಆದರೆ ಇನ್ನೂ ವೈದ್ಯಕೀಯ ಆಮ್ಲಜನಕದ ಅಗತ್ಯವಿರುವ ರೋಗಿಗಳು ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *