Ad Widget .

ವಿರಾಟ್ ಒಬ್ಬ ಚಾಂಪಿಯನ್ ಆಟಗಾರ: ಟಿಮ್ ಪೇನ್

Ad Widget . Ad Widget .

ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ಅವರು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ.

Ad Widget . Ad Widget .

ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಸೀಸ್ ನಾಯಕ, ‘ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್. ನಾನು ಯಾವತ್ತೂ ಅವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಚಾಂಪಿಯನ್ ಪ್ಲೇಯರ್. ತಂಡದ ಗೆಲುವಿಗಾಗಿ ಕೊನೆಯವರೆಗೂ ಹೋರಾಡುವ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸುತ್ತಾರೆ. ನಾನು ಕೊಹ್ಲಿ ಅವರನ್ನು ಮತ್ತು ಅವರ ಆಟವನ್ನು ತುಂಬಾ ಇಷ್ಟಪಡುತ್ತೇನೆ. ಅವರ ಚಾಲೆಂಜಿಂಗ್ ಬ್ಯಾಟಿಂಗ್ ನೋಡುವುದೇ ಒಂದು ಖುಷಿ. ವಿರಾಟ್ ಭಾರತ ತಂಡದಲ್ಲಿದ್ದರು ಅವರು ನನ್ನ ಸಹೋದರನಂತೆ ಇದ್ದಾರೆ”ಟ’ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಭಾರತ-ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭ ಭಾರತ ತಂಡದ ಕೆಚ್ಚೆದೆಯ ಹೋರಾಟದ ಫಲವಾಗಿ ಭಾರತ ಐತಿಹಾಸಿಕ ಸರಣಿ ಗೆಲುವು ಸಾಧಿಸಿ, ಬಾರ್ಡರ್-ಗವಾಸ್ಕರ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು.

Leave a Comment

Your email address will not be published. Required fields are marked *