Ad Widget .

ನೀವೆಲ್ಲಿದ್ದೀರೋ ಅಲ್ಲಿಗೆ ಬಂದು ಬೆಳೆ ಖರೀದಿಸ್ತಿನಿಯೆಂದ ಉಪೇಂದ್ರ

ಬೆಂಗಳೂರು: ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಸಿನಿ ಕಾರ್ಮಿಕರ ನೇರವಿಗೆ ನಿಂತಿದ್ದ ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಇದೀಗ ರೈತರು ಬೆಳೆದಿರುವ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದಾರೆ.

Ad Widget . Ad Widget .

ಲಾಕ್‍ಡೌನ್ ನಿಂದ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಂದ ತರಕಾರಿ ಖರೀದಿಸಿ ಅವಶ್ಯಕತೆ ಇರುವವರಿಗೆ ಹಂಚಲು ಮುಂದಾಗಿದ್ದಾರೆ ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಬೆಳೆಗಳನ್ನು ಎಲ್ಲಿ ಬೆಳದಿದ್ದಾರೋ ಅವರಿರುವ ಜಾಗಕ್ಕೆ ತೆರಳಿ ಅಲ್ಲಿಂದ ಸೂಕ್ತ ಬೆಲೆ ಖರೀದಿಸಿ ಅಗತ್ಯವಿರುವವರಿಗೆ ಸಹಾಯ ಮಾಡುತ್ತೇವೆ. ಕರೆ ಮಾಡಿ ಎಂದು ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದಾರೆ.

Ad Widget . Ad Widget .

ನೀವು ಬೆಳೆದ ಬೆಳೆ ಯಾವುದು ? ಆ ಬೆಳೆ ಎಷ್ಟು ಕೆ.ಜಿ ಅಥವಾ ಕ್ವಿಂಟಾಲ್ ಇದೆ ? ಅದರ ಅಂತಿಮ ಬೆಲೆ ಎಷ್ಟು ? ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವಚ್ಚ ಎಷ್ಟು..? ರೈತರು ಹಂಚಿಕೊಳ್ಳಬೇಕಾದ ಮಾಹಿತಿಯನ್ನು ಹಂಚಿಕೊಂಡರೆ ಉಪೇಂದ್ರ ಅವರು ಬೆಳೆಯನ್ನು ಕೊಂಡು ಅಗತ್ಯ ಇರುವವರಿಗೆ ಸಹಾಯ ಮಾಡಲಿದ್ದಾರೆ.ಸಿನಿಮಾ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ನೀಡಿ ಮಾನವೀಯತೆ ಮೆರೆದಿದ್ದ ಉಪೇಂದ್ರ ಅವರು ಇದೀಗ ದೇಶದ ಬೆನ್ನೆಲುಬು ಆದ ರೈತರ ಬೆನ್ನಿಗೆ ನಿಂತು ಅವರಿಗೆ ನ್ಯಾಯ ಒದಗಿಸೋ ಕೆಲಸಕ್ಕೆ ಮುಂದಾಗಿದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಪೇಂದ್ರ ಅವರ ಈ ಕಾರ್ಯಕ್ಕೆ ಅನೇಕ ಸ್ಟಾರ್ ಗಳು, ಅಭಿಮಾನಿಗಳು, ಜನ ಸಾಮಾನ್ಯರು ಸಹಾಯವನ್ನು ಮಾಡುತ್ತಿದ್ದಾರೆ. ಉಪೇಂದ್ರ ಅವರ ಸಾಮಾಜಿಕ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Comment

Your email address will not be published. Required fields are marked *