ಕೋಲಾರ.ಮೇ.17: ಸಾಮಾನ್ಯವಾಗಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ. ಆದರೆ ಇಂಥಹುದೇ ಸಿನಿಮೀಯ ಘಟನೆಯೊಂದು ಕೋಲಾರದ ಮುಳುಬಾಗಿಲು ತಾಲೂಕಿನಲ್ಲಿ ನಡೆದಿದೆ. ಹಾಗಂತ ಈ ಸನ್ನಿವೇಶ ಬೇಕಂತಾನೇ ನಡೆದದ್ದಲ್ಲ. ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ ಮದುವೆಯೊಂದು ನಡೆದು ಹೋಗಿದೆ.
ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಎನ್ನಲಾಗಿದ್ದು, ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಒಂದೇ ಮುಹೂರ್ತದಲ್ಲಿ ಮದುವೆ ಮಾಡಿಕೊಂಡಿದ್ದಾನೆ.
ಸದ್ಯ, ಮದುವೆಯಾದ ಫೋಟೋ ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಮದುವೆ ನೋಡಿದ ಬಗ್ಗೆ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ರೋಲ್ ಆಗ್ತಾ ಇರೋ ಈ ಮದುವೆಗೆ ಒಂದು ಕಾರಣವೂ ಇದೆ ಎಂದು ತಿಳಿದುಬಂದಿದೆ.
ಈ ಮದುವೆಯ ಅಸಲಿ ಕಾರಣವೆಂದರೆ ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಆಕೆಗೆ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ. ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ ನನ್ನನ್ನು ಮದುಯಾಗಬೇಕೆಂದರೆ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದರು. ಅದಕ್ಕೆ ಒಪ್ಪಿದ ಅವರು ಮೇ.7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಕ್ಕನಿಗಾಗಿ ತ್ಯಾಗ ಮೆರೆದ ತಂಗಿಯ ಬಗ್ಗೆ ಊರವರು ಮಾತಾಡುತ್ತಿದ್ದರೆ, ಇಂತಹ ಅವಕಾಶ ನಮಗಾದರೂ ಸಿಗಬಾರದಿತ್ತೇ ಎಂದು ಕೆಲ ಪಡ್ಡೆಹುಡುಗರು ಮನಸಲ್ಲಿ ಮಂಡಿಗೆ ತಿನ್ನುತ್ತಿದ್ದಾರೆ.