Ad Widget .

ನನ್ನನ್ನು ಬಂಧಿಸಿ: ರಾಹುಲ್ ಗಾಂಧಿ ಟ್ವೀಟ್

Ad Widget . Ad Widget .

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಆಡಳಿತ ಸರ್ಕಾರ ತೆಗೆದುಕೊಳ್ಳುತ್ತಿರುವ ನಿಲುವಿನ ಕುರಿತಾಗಿ ಟ್ವೀಟ್ ಮಾಡುತ್ತಾ ಜಾಗೃತಿ, ಎಚ್ಚರಿಕೆ ನೀಡುತ್ತಿರುವ ಜೊತಗೆ ಇದೀಗ ನನ್ನನ್ನು ಬಂಧಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Ad Widget . Ad Widget .

ದೆಹಲಿಯ ಕೆಲವು ಗೋಡೆಗಳ ಮೇಲೆ ಮೋದಿ ವಿರುದ್ಧ ಗೋಡೆ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ದೆಹಲಿ ಪೊಲೀಸರು ೧೭ ಜನರನ್ನು ಬಂಧಿಸಿ ಅವರ ವಿರುದ್ಧವಾಗಿ ೨೧ ಕೇಸ್‌ಗಳನ್ನು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಇಂತಹ ಒಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ನಗರದ ಗೋಡೆಗಳ ಮೇಲೆ ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನು ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..?ಎಂಬ ಗೋಡೆಬರಗಳನ್ನ ಬರೆಯಲಾಗಿತ್ತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.


ಈ ನಡೆಯ ವಿರುದ್ಧ ಆಕ್ರೋಶ ಹೊರಹಾಕಿರೋ ರಾಹುಲ್ ಗಾಂಧಿ ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನ ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..? ಎಂಬ ಬರಹವಿರುವ ಫೋಟೋವನ್ನು ಹಂಚಿಕೊAಡು ನನ್ನನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *