ಬೆಳ್ತಂಗಡಿ: ತಂತಿ ದುರಸ್ತಿಗೊಳಿಸುತ್ತಿದ್ದಾಗ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ತೆಕ್ಕಾರು ಸಮೀಪದ ಪಿಂಡಿಕಲ್ಲು ಎಂಬಲ್ಲಿ ನಡೆದಿದೆ.
ಕಲ್ಲೇರಿ ಸೆಕ್ಷನ್ ಮೆಸ್ಕಾಂನ ಲೈನ್ ಮ್ಯಾನ್ ವಿಕಾಸ್ ಮೃತಪಟ್ಟವರು. ಇವರು ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಹಾಗಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿತ್ತು. ಇದೇ ವೇಳೆ ಸ್ಥಳದಲ್ಲಿ ಕಂಬದ ಮೇಲೆ ದುರಸ್ತಿಕಾರ್ಯ ಕೈಗೊಂಡಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಬೇಟಿ ನೀಡಿದ್ದು, ತನಿಖೆ ಕೈಕೊಂಡಿದ್ದರೆ.
ಬೆಳ್ತಂಗಡಿ | ವಿದ್ಯುತ್ ಆಘಾತಕ್ಕೊಳಗಾಗಿ ಲೈನ್ ಮ್ಯಾನ್ ಮೃತ್ಯು
