ನೇಪಾಳ: ಜಗತ್ತಿನ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 25 ಬಾರಿ ಏರುವ ಮೂಲಕ ನೇಪಾಳದ ಕಮಿ ರೀಟಾ ಶೆರ್ಪಾರವರು ಹಲವು ವರ್ಷಗಳಿಂದ ತಾವೇ ಸೃಷ್ಠಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.
ಕಮಿ ರೀಟಾ ಶೆರ್ಪಾರವರ ವಯಸ್ಸು 49. ಇವರು 1994ರಲ್ಲಿ ಮೊದಲ ಬಾರಿಗೆ 8848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ್ದ ಬಳಿಕ ಪ್ರತಿ ವರ್ಷವೂ ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ ಬಾರಿ ಎವರೆಸ್ಟ್ ಏರುವ ಮೂಲಕ ದಾಖಲೆ ನಿರ್ಮಿಸಿದ್ದರು. ಆದರೆ 2019ರಲ್ಲಿ ಕಮಿ ರೀಟಾ ಶೆರ್ಪಾ 22ನೇ ಬಾರಿ ಏರಿ ವಿಶ್ವದಾಖಲೆ ಸ್ಥಾಪಿಸಿದ್ದರು. ಈ ಬಾರಿ ಅವರು ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.
ಶೆರ್ಪಾ ಶಿಖರಕ್ಕೆ ಏರುವ ಹಗ್ಗಗಳನ್ನು ಸರಿಪಡಿಸುವ 12 ಸದಸ್ಯರ ತಂಡದ ಸದಸ್ಯರಾಗಿದ್ದಾರೆ. ಪ್ರಸಕ್ತ ಆರೋಹಣ ಋತುವಿನ ಮೊದಲ ಆರೋಹಿಗಳು ಈ ತಂಡದ ಸದಸ್ಯರಾಗಿದ್ದಾರೆ.