ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ! ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ […]