ಪ್ರಿನ್ಸ್ ಆರ್ಥರ್, ದಿ ಡ್ಯೂಕ್ ಆಫ್ ಕನ್ಹಾಟ್ ನಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟ ಭಾರತದ ಮುಕುಟಮಣಿ ದೆಹಲಿಯ ಇಂಡಿಯಾ ಗೇಟ್ ಶತ ವರ್ಷಗಳ ಹೊಸ್ತಿಲಲ್ಲಿದೆ. ಈ ವಿಚಾರ ತಿಳಿಯಬೇಕಾದರೆ ಬರೋಬ್ಬರಿ 100 ವರ್ಷಗಳ ಇತಿಹಾಸ ಪುಟಗಳನ್ನು ತಿರುಚಿ ಹಾಕಬೇಕಾಗುತ್ತದೆ.
ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್ ಎತ್ತರವಾಗಿರುವ ಇದು, ಪ್ಯಾರಿಸ್‌ನ ಆರ್ಕ್- ದೇ- ಥ್ರೋಂಫ್‌ಗಾಗಿ ನಿರ್ಮಿಸಲಾಗಿತ್ತು.
ಈ ಸ್ಮಾರಕವನ್ನು ಅಸಲಿಯಾಗಿ ಆಲ್ ಇಂಡಿಯಾ ವಾರ್ ಮೆಮೊರಿಯಲ್ ಕೊಮೆಮೊರೇಟ್ ಎನ್ನಲಾಗಿದೆ. ಸುಮಾರು 70,000 ಮಂದಿ ಬ್ರಿಟಿಷ್ ಸೈನಿಕರು 1919 ರಲ್ಲಿ ನಡೆದ ಮೂರನೇ ಆಗ್ಲೋ- ಅಪಘಾನ್ ಯುದ್ಧ ಹಾಗೂ ಮೊದಲ ವಿಶ್ವ ಮಹಾಯುದ್ಧದಲ್ಲಿ ಮಡಿದಿದ್ದರು. ಅವರ ನೆನಪಿಗಾಗಿ ಇದನ್ನು ನಿರ್ಮಿಸಲಾಗಿದೆ. ಇಂಡಿಯಾ ಗೇಟ್ ನಿರ್ಮಾಣಕ್ಕೆ 1921ರಲ್ಲಿ ಅಡಿಗಲ್ಲು ಬಿತ್ತು. ಕೊನಂಗಟ್ಟದ ಡ್ಯೂಕ್ ಆಗಿದ್ದ ರಾಯಲ್ ಹಿಂಗನ್ನೆಸ್ ಎಂಬುವರಿಂದ ಈ ಕಾರ್ಯ ನೆರವೇರಿತು. ಆದರೆ ಇದು ಪೂರ್ಣಗೊಂಡಿದ್ದು 1931ರಲ್ಲಿ. ಅಂದು ಈ ಪ್ರದೇಶವನ್ನು ಲಾರ್ಡ್ ಲಿರ್ವಿನ್ ತನ್ನ ಹಿಡಿತದಲ್ಲಿ ಹೊಂದಿದ್ದ. ಈ ನಿರ್ಮಾಣದ ವಿನ್ಯಾಸವನ್ನು ಎಡ್ವಿನ್ ಲುಟ್ಯೇನ್ಸ್ ಎಂಬುವರು ಮಾಡಿದ್ದಾರೆ. ನಿರ್ಮಾಣಕ್ಕೆ ಕೆಂಪು ಹಾಗೂ ಪಾಲೆ ಕಲ್ಲುಗಳನ್ನು ಬಳಸಿದ್ದು, ಜತೆಗೆ ಗ್ರನೈಟ್ ಬೆರೆಸಲಾಗಿದೆ. ಇದರ ಒಳಗೆ ‘ಅಮರ್ ಜವಾನ್ ಜ್ಯೋತಿ’ ಇದೆ. ಇದನ್ನು 1971 ರಲ್ಲಿ ಭಾರತ್-ಪಾಕ್ ನಡುವೆ ನಡೆದ ಕದನದಲ್ಲಿ ಮಡಿದ ಯೋಧರಿಗಾಗಿ ಸದಾ ಉರಿಸುತ್ತಿರಲಾಗುತ್ತದೆ. ಇಂಡಿಯಾ ಗೇಟ್ ಎದುರು ಹಿಂದೆ ವಿನ್ಸೆಟ್ ಕೆನೋಪಿ ಇತ್ತು. ಏಂಪಾಯರ್ ಆಫ್ ಇಂಡಿಯಾ ಜಾರ್ಜ್ 10 ಕೆನೋಪಿ ಇದಾಗಿತ್ತು. ಆದರೆ ಇದನ್ನು ಈಗ ಕೊರೋನೇಷನ್ ಪಾರ್ಕ್ ಗೆ ವರ್ಗಾಯಿಸಲಾಗಿದೆ.

ದೆಹಲಿಗೆ ಪ್ರಯಾಣಿಸುವ ಪ್ರತಿಯೊಬ್ಬನನ್ನೂ ಸೂಜಿಗಲ್ಲಿನಂತೆ ಸೆಳೆಯುವ ಇಂಡಿಯಾ ಗೇಟ್ ಬೃಹತ್ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಶತಮಾನ ಸಂದಿದೆ. ಹೌದು. ಈಗ ಶತಮಾನೋತ್ಸವ ದಿನ ಆಚರಿಸಿಕೊಳ್ಳುತ್ತಿರುವ ಈ ಕಟ್ಟಡದ ಬುನಾದಿ ಕಲ್ಲನ್ನು ಫೆ.10, 1921ರಂದು ಭಾರತಕ್ಕೆ ಭೇಟಿ ನೀಡಿದ ಪ್ರಿನ್ಸ್ ಆರ್ಥರ್ ಇಟ್ಟಿದ್ದರು. ಅದು ಇಂದು ಅಖಿಲ ಭಾರತ ಯುದ್ಧ ಸ್ಮಾರಕ ಕಮಾನು ಅಥವಾ ಇಂಡಿಯಾ ಗೇಟ್ ಎಂದು ಪ್ರಚಲಿತಲ್ಲಿದೆ.
42 ಮೀಟರ್ ಎತ್ತರ ಸ್ಯಾಂಡ್‌ಸ್ಟೋನ್ ಸ್ಮಾರಕ ಇದಾಗಿದ್ದು, ಶಂಕುಸ್ಥಾಪನೆ ಕಳೆದು ಸರಿಸುಮಾರು ಒಂದು ದಶಕದ ನಂತರ ಲೋಕಾರ್ಪಣೆಗೊಂಡಿತ್ತು. ಭಾರತದ ವಿಸ್ತಾರವಾದ ರಾಜಧಾನಿಯ ಕೇಂದ್ರ ಸ್ಥಳವಾಗಿದ್ದು, ದೇಶಕ್ಕಾಗಿ ಜೀವತೆತ್ತ ಯೋಧರ ಸ್ಮರಣೆಗಾಗಿ ಕಮಾನು ಅಡಿಯಲ್ಲಿ ಆರದ ಶಾಶ್ವತ ಜ್ವಾಲೆ ಕಳೆದ ತೊಂಬತ್ತು ವರ್ಷಗಳಿಂದ ನಿರಂತರವಾಗಿ ಉರಿಯುತ್ತಿದೆ ಎಂದರೆ ನೀವು ಆಶ್ಚರ್ಯಪಡಲೇಬೇಕು.
ನಮ್ಮ ಸೇನಾಪಡೆ ಗೌರವ ಸಲ್ಲಿಸುವ ಶಾಶ್ವತ ಸ್ಥಳವಾಗಿ, ರಾಷ್ಟ್ರದ ಗೌರವದ ಸಂಕೇತವಾಗಿ, ದೆಹಲಿ ಭೇಟಿ ಕೊಟ್ಟ ಪ್ರತಿಯೊಬ್ಬ ನಾಗರಿಕರು ಭೇಟಿ ಕೊಡಬೇಕಾದ ಐಕಾನಿಕ್ ಸ್ಥಳವಾಗಿದೆ ಇಂಡಿಯಾ ಗೇಟ್.

ಭಾರತೀಯರ ಹೆಮ್ಮೆಯ ಇಂಡಿಯಾ ಗೇಟ್ ರಾಜ್‌ಪಥ್‌ನಲ್ಲಿ ನಡೆಯುವ ವಾರ್ಷಿಕ ಸೈನಿಕ ಮೆರವಣಿಗೆಯ ಸಮ್ಮುಖದಲ್ಲಿ ಸೇರಿಕೊಳ್ಳುವುದಕ್ಕೆ ಮುಂಚಿತವಾಗಿ ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಯೋಧರಿಗೆ ಗೌರವಾರ್ಪಣ ಮಾಡುವುದು ವಾಡಿಕೆಯಾಗಿದೆ. ಇಲ್ಲಿರುವ ಧ್ವಜಗಳು ಭಾರತದ 3 ಸೇನಾ ಪಡೆಗಳನ್ನು (ಭೂಸೇನೆ, ನೌಕಾಪಡೆ, ಮತ್ತು ವಾಯು ಪಡೆ) ಪ್ರತಿನಿಧಿಸುತ್ತವೆ; ಒಂದಾದ ಮೇಲೊಂದರಂತೆ ಪಡೆಗಳು ವರಸೆಯಾಗಿ ಬರುವ ರೀತಿಯಲ್ಲಿ, ಪ್ರತಿ ಪಡೆಗೆ ಸೇರಿದ ಓರ್ವ ಯೋಧನು ಪ್ರತಿದಿನವೂ ದ್ವಾರ ಮತ್ತು ಸಮಾಧಿಯನ್ನು ಕಾವಲು ಕಾಯುತ್ತಾನೆ. ವರ್ಷಗಳ ಇತಿಹಾಸವನ್ನು ಸಾರಿ ಹೇಳುತ್ತಿದೆ.
ಸಂಗ್ರಹ: ರೂರಲ್ ಟೂರಿಸ್ಟರ್ ಟೀಂ