ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ
ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ “ಅರಂತೋಡು”ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ. ಜುಳು ಜುಳು ಹರಿಯುವ ತೊರೆಯ ತಟದಲ್ಲಿ ಕಂಗೊಳಿಸುವುದೇ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಾಲಯ. ಇದು 3000 ವರ್ಷಗಳಷ್ಟು ಹಳೆಯ ದೇವಸ್ಥಾನವೆಂದು ಸಾಮಾನ್ಯವಾಗಿ ಹೇಳಿದರೂ ಮಹಾಭಾರತ ಕಾಲದಲ್ಲಿ ಇತ್ತೆಂಬುದಕ್ಕೆ ಇತಿಹಾಸಕಾರರು ದಾಖಲೆ ಕೊಡುವ ಕಾರಣ 5000 ವರ್ಷದ ಮೇಲ್ಪಟ್ಟದ್ದೆಂದು ಹೇಳಲಾಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ “ತುದಿ” ಯ ಕಾನನ(ಕಾಡು) ಆದ ಕಾರಣ” […]