ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿವನಿ ಗ್ರಾಮದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯಿಂದಲೇ ಬಾಲಕಿ ಕೊಲೆಯಾಗಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ಇದೀಗ ಮಗಳನ್ನು ಹತ್ಯೆಗೈದ ತಂದೆ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್, ಮಂಗಳ ಪ್ರೀತಿಸಿ ಮದುವೆಯಾದವರು. ಆದರೂ ನಿತ್ಯ ಜಗಳವಾಡುತ್ತಿದ್ದರು. ಹೆಂಡತಿ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದನು. ಇನ್ನೂ ಮಗಳ ಹುಟ್ಟಿನ ಬಗ್ಗೆ ಅನುಮಾನಪಟ್ಟು ಭೀಕರ ಕೊಲೆ ಮಾಡಿದ್ದಾನೆ. ಇದೇ ಅನುಮಾನದಲ್ಲಿ ಮಂಜುನಾಥ್ ನಿತ್ಯವೂ ಕುಡಿದು ಬಂದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಸೆಪ್ಟೆಂಬರ್ 19 ರಂದು ಕುಡಿದು ಮಧ್ಯಾಹ್ನ ಮನೆಗೆ ಬಂದು ಈ ಕೃತ್ಯ ಎಸಗಿದ್ದಾನೆ. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನೂ ಈ ಹಿಂದೆ ಪ್ರಕರಣ ಮುಚ್ಚಿ ಹಾಕಲು ಮಗಳ ಕೆನ್ನೆ ಕಚ್ಚಿದ ತಂದೆ ಅತ್ಯಾಚಾರ ಆಗಿದೆ ಎಂದು ಬಿಂಬಿಸಲು ಹೊರಟಿದ್ದ. ಚಿನ್ನ ಕಸಿದು ಕಳ್ಳತನ ಆರೋಪಹೊರಿಸಲು ಮುಂದಾಗಿದ ತನಿಖೆ ವೇಳೆ ತಂದೆ ಮಂಜುನಾಥ್ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.