ಕರಾವಳಿ

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…!

ಮಂಗಳೂರು: ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದ ವ್ಯಕ್ತಿಯೋರ್ವರ ಮೃತದೇಹವನ್ನು ರಾತ್ರಿ ಬೆಂದೂರು ವೆಲ್ ಕೊಲೊಸೊ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಆದರೆ, ಇಂದು ಬೆಳಗ್ಗೆ ನೋಡಿದಾಗ ಹರೀಶ್ ಶೆಟ್ಟಿ ಅವರ ಕಿವಿಯಲ್ಲಿದ್ದ ಡೈಮಂಡ್ ರಿಂಗ್ ಕಾಣೆಯಾದ ಬಗ್ಗೆ ಬೆಳಕಿಗೆ ಬಂದಿದೆ.ಸಿಟಿ ಸೆಂಟರ್ ಮಾಲ್‍ನಲ್ಲಿ ಸೆಕ್ಯುರಿಟಿ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಹರೀಶ್ ಶೆಟ್ಟಿ (42) ಮೃತ ಪಟ್ಟವರು. ಇವರು ನಿನ್ನೆ ಬೆಳಗ್ಗೆ ತನ್ನ ಪತ್ನಿ, ಮಕ್ಕಳೊಂದಿಗೆ ಕುಂದಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ದಿಢೀರ್ ಆಗಿ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು […]

ಮಂಗಳೂರು: ಶವದಿಂದಲೇ ಡೈಮಂಡ್ ರಿಂಗ್ ಕಳ್ಳತನ|ಆಸ್ಪತ್ರೆಯಲ್ಲಿದ್ದ ಸೆಕ್ಯುರಿಟಿಯ ಸುತ್ತ ಬೆಳೆದ ಅನುಮಾನದ ಹುತ್ತ…! Read More »

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ

ಉಡುಪಿ: ಗದ್ದೆ‌ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಗಂಭೀರ ಗಾಯಗೊಂಡ ಘಟನೆ ಪರ್ಕಳದ ಪರೀಕದಲ್ಲಿ ಸಂಭವಿಸಿದೆ. ಉಡುಪಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ಸಿಡಿಲು ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಉಡುಪಿ: ಸಿಡಿಲು ಬಡಿದು ಇಬ್ಬರು ಗಂಭೀರ Read More »

ಉಡುಪಿ: ಫುಟ್ ವೇರ್ ಮಳಿಗೆ ಬೆಂಕಿಗಾಹುತಿ: ಲಕ್ಷಾಂತರ ರೂ. ನಷ್ಟ

ಉಡುಪಿ: ಮಣಿಪಾಲದಲ್ಲಿರುವ ಫುಟ್ ವೇರ್ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಉಂಟಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ಖ್ಯಾತ ಫುಟ್ ವೇರ್ ಮಳಿಗೆಗೆ ಇದಾಗಿದ್ದು ಶಾಟ್ ಸಕ್ರ್ಯೂಟ್’ನಿಂದ ದುರಂತ ಸಂಭವಿಸಿದೆ. ಅಂಗಡಿ ಮಾಲೀಕರು ರಾತ್ರಿ ವ್ಯವಹಾರ ಮುಗಿಸಿ ಅಂಗಡಿ ಮುಚ್ಚಿ ತೆರಳಿದ ಬಳಿಕ ಈ ಘಟನೆ ನಡೆದಿದೆ. ಒಳಗಿದ್ದ ಸಂಪೂರ್ಣ ದಾಸ್ತಾನು ಬೆಂಕಿಗಾಹುತಿಯಾಗಿದ್ದು ಉಡುಪಿ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಫುಟ್ ವೇರ್ ಮಳಿಗೆ ಅಲ್ಲದೇ ಪಕ್ಕದ ಒಂದು

ಉಡುಪಿ: ಫುಟ್ ವೇರ್ ಮಳಿಗೆ ಬೆಂಕಿಗಾಹುತಿ: ಲಕ್ಷಾಂತರ ರೂ. ನಷ್ಟ Read More »

ತಾಲಿಬಾನಿಗಳ ಕರಿನೆರಳು| ಆತಂಕದಲ್ಲಿದ್ದಾರೆ ಮಂಗಳೂರು ವಿ.ವಿಯ ಅಪ್ಘಾನ್ ವಿದ್ಯಾರ್ಥಿಗಳು|

ಮಂಗಳೂರು : ದೇಶವು ತಾಲಿಬಾನ್‌ ಉಗ್ರರ ಕೈವಶವಾಗುತ್ತಿದ್ದಂತೆ ಇತ್ತ ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿ ಸ್ಥಾನದ ವಿದ್ಯಾರ್ಥಿಗಳು ಮುಂದೇನು ಎಂಬ ಆತಂಕದಲ್ಲಿದ್ದಾರೆ. 2-3 ವರ್ಷದ ಹಿಂದೆ ಮಂಗಳೂರಿಗೆ ಶಿಕ್ಷಣಕ್ಕಾಗಿ ಬಂದಿದ್ದ ಈ ವಿಧ್ಯಾರ್ಥಿಗಳು ಪದವಿಯಲ್ಲಿ 18, ಸ್ನಾತಕೋತ್ತರ ಪದವಿಯಲ್ಲಿ 13, ಪಿಎಚ್‌ಡಿಯಲ್ಲಿ 22 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಹಾಸ್ಟೆಲ್‌ಗ‌ಳಲ್ಲಿದ್ದಾರೆ. ತಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಮಾಧ್ಯಮಗಳ ಮೂಲಕ ಮೊಬೈಲ್‌ ಕರೆ ಮಾಡಿ ವಿಚಾರಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಕೆಲವು ವಿದ್ಯಾರ್ಥಿಗಳು ದೇಶದ ಪರಿಸ್ಥಿತಿ ಹಾಗೂ ಮನೆ ಮಂದಿಯ

ತಾಲಿಬಾನಿಗಳ ಕರಿನೆರಳು| ಆತಂಕದಲ್ಲಿದ್ದಾರೆ ಮಂಗಳೂರು ವಿ.ವಿಯ ಅಪ್ಘಾನ್ ವಿದ್ಯಾರ್ಥಿಗಳು| Read More »

ಬೆಳ್ತಂಗಡಿ| ತಾಯಿಯನ್ನೇ ಅತ್ಯಾಚಾರ‌ ಮಾಡಿದ್ದಾನೆ ಈತ…!, ಯುವಕನ ವಿರುದ್ಧ ಅಶ್ಲೀಲ ಸಂದೇಶ ರವಾನೆ, ದೂರು ದಾಖಲು

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಲಾಯಿಲದ ಯುವಕನ ಬಗ್ಗೆ ಮಾನಹಾನಿಕರವಾಗಿ ಅಪಪ್ರಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಾಯಿಲ ಸಮೃದ್ಧಿ ನಿವಾಸದ ಸುಶಾನ್ ಚಂದ್ರ ಎಂಬ ಯುವಕನ ಬಗ್ಗೆ ಇತ್ತೀಚೆಗಷ್ಟೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಕಿಡಿಗೇಡಿಗಳು ರವಾನಿಸಿದ್ದರು.`ಯುವಕನೋರ್ವ ತನ್ನ ತಾಯಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಈ ವಿಕೃತ ಕಾಮಿಯ ಹೆಸರು ಸುಶನ್ ಚಂದ್ರ 56 ಅಡಿ ಎತ್ತರವಿದ್ದು, ಗುಂಗುರು ಕೂದಲು

ಬೆಳ್ತಂಗಡಿ| ತಾಯಿಯನ್ನೇ ಅತ್ಯಾಚಾರ‌ ಮಾಡಿದ್ದಾನೆ ಈತ…!, ಯುವಕನ ವಿರುದ್ಧ ಅಶ್ಲೀಲ ಸಂದೇಶ ರವಾನೆ, ದೂರು ದಾಖಲು Read More »

ದೇಶದ ಹೆಸರು ಕೆಡಿಸಲು ಕಾಂಗ್ರೆಸ್ ಪ್ರಯತ್ನ – ಸಚಿವ ರಾಜೀವ್ ಚಂದ್ರಶೇಖರ್ ಆರೋಪ

ಮಂಗಳೂರು: ‘ದೇಶ ಮೊದಲು ಎನ್ನುವುದು ಬಿಜೆಪಿಯ ನಿಲುವು. ಕಾಂಗ್ರೆಸ್‌ನವರಿಗೆ ಇಂತಹ ಯಾವುದೇ ಬದ್ಧತೆ ಇಲ್ಲ. ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುವುದನ್ನು ತಡೆದು, ದೇಶದ ಹೆಸರನ್ನು ಕೆಡಿಸುವುದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಪ್ರಯತ್ನವಾಗಿದೆ’ ಎಂದು ಕೇಂದ್ರ ಕೌಶಲಾಭಿವೃದ್ಧಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ. ಬಿಜೆಪಿ ಜನಾಶೀರ್ವಾದ ಯಾತ್ರೆ ಪ್ರಯುಕ್ತ ಬುಧವಾರ ಇಲ್ಲಿ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಆಡಳಿತ ನಡೆಸಿದ 60

ದೇಶದ ಹೆಸರು ಕೆಡಿಸಲು ಕಾಂಗ್ರೆಸ್ ಪ್ರಯತ್ನ – ಸಚಿವ ರಾಜೀವ್ ಚಂದ್ರಶೇಖರ್ ಆರೋಪ Read More »

ರಥಯಾತ್ರೆಯಲ್ಲಿ ಸಾವರ್ಕರ್ ಫೋಟೋ ಹಾಕಲು ಅನುಮತಿ ನೀಡಿದ ಪಿಡಿಒರನ್ನು ಬಂಧಿಸಿ’- ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ

ಪುತ್ತೂರು: ಕಬಕ ಸ್ವಾತಂತ್ರ್ಯ ರಥ ತಡೆ ಪ್ರಕರಣದ ಬಳಿಕ ನಡೆಯತ್ತಿರುವ ಪ್ರತಿಭಟನಾ ಪರ್ವ ಇಂದೂ ಮುಂದುವರೆದಿದ್ದು, ನಿನ್ನೆ ಹಿಂದೂ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶಿಸಿದರೆ ಇಂದು ಎಸ್ ಡಿಪಿಐ ಪಕ್ಷದಿಂದ ಪ್ರತಿಭಟನೆ ನಡೆದಿದ್ದು, ಸ್ವಾತಂತ್ರ್ಯ ರಥದಲ್ಲಿ ವೀರ ಸಾವರ್ಕರ್ ಚಿತ್ರ ಹಾಕಲು ಆನುಮತಿ ನೀಡಿದ ಗ್ರಾಮಪಂಚಾಯತ್ ಪಿಡಿಒ ವಿರುದ್ಧ ಕೇಸು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಪುತ್ತೂರಿನ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರು ಸಾವರ್ಕರ್ ಒರ್ವ ಹೇಡಿ, ಬ್ರಿಟಿಷರಲ್ಲಿ ಕ್ಷಮೆ ಕೋರಿದ ವ್ಯಕ್ತಿ, ಅಲ್ಲದೆ ತನ್ನ

ರಥಯಾತ್ರೆಯಲ್ಲಿ ಸಾವರ್ಕರ್ ಫೋಟೋ ಹಾಕಲು ಅನುಮತಿ ನೀಡಿದ ಪಿಡಿಒರನ್ನು ಬಂಧಿಸಿ’- ಎಸ್ ಡಿಪಿಐ ಮುಖಂಡ ಶಾಫಿ ಬೆಳ್ಳಾರೆ Read More »

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯ ಗಡಿಯಲ್ಲಿರುವ ಮದ್ಯದಂಗಡಿಗಳನ್ನು ಆಗಸ್ಟ್ 30ರ ತನಕ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ನೆರೆಯ ಕೇರಳ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಸಾರ್ವಜನಿಕರು ಮದ್ಯ ಸೇವನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳ ಮದ್ಯದಂಗಡಿಗಳನ್ನೇ ಅವಲಂಭಿಸಿದ್ದು ಇದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ

ದಕ್ಷಿಣ ಕನ್ನಡ ಗಡಿಯಲ್ಲಿ ಆಗಸ್ಟ್ 30ರ ವರೆಗೂ ಮದ್ಯದಂಗಡಿಗಳು ಬಂದ್-ಜಿಲ್ಲಾಧಿಕಾರಿ ಆದೇಶ Read More »

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!?

ಪುತ್ತೂರು: ಕಬಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ಸಾವರ್ಕರ್ ಫೋಟೊ ಇದ್ದ ವಾಹನವನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.ಕಬಕ ಗ್ರಾಮ ಪಂಚಾಯತ್ ವತಿಯಿಂದ ನಡೆಸಲಾಗಿದ್ದ ಸ್ವರಾಜ್ಯ ರಥ ಯಾತ್ರೆಯಲ್ಲಿ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಿರುವುದನ್ನು ಆಕ್ಷೇಪಿಸಿ ರಥ ಯಾತ್ರೆ ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಅಜೀಜ್ (43), ಶಮೀರ್ ಮುರ (40) ಹಾಗೂ ಕೊಡಿಪ್ಪಾಡಿ ಗ್ರಾಮದ ಅಬ್ದುಲ್ ರಹಿಮಾನ್‌ ಅವರನ್ನು ಪುತ್ತೂರು ನಗರ

ಒಂದೆಡೆ ಸಾವರ್ಕರ್ ರಥಯಾತ್ರೆ, ಮತ್ತೊಂದೆಡೆ ಆರೋಪಿಗಳಿಗೆ ಜಾಮೀನು- ಇದೆಂಥಾ ವಿಪರ್ಯಾಸ…!? Read More »

ಕಮಿಷನರ್ ಗೆ ಧ್ವನಿಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ದಂಪತಿ – ಕೋವಿಡ್,ಬ್ಲ್ಯಾಕ್ ಫಂಗಸ್ ಗೆ ಹೆದರಿ ಜೀವತ್ಯಾಗ..!

ಮಂಗಳೂರು: ಕೋವಿಡ್ ತಗುಲಿದೆ ಎಂಬ ಭಯದಲ್ಲಿ ದಂಪತಿ, ನಗರ ಪೊಲೀಸ್ ಕಮಿಷನರ್‌ಗೆ ವಾಟ್ಸ್ ಆ್ಯಪ್‌ನಲ್ಲಿ ಧ್ವನಿ ಮುದ್ರಣ ಕಳುಹಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದ್ಯಮಿ ರಮೇಶ ಸುವರ್ಣ ತಾನು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ‘ಕೋವಿಡ್ ಬಂದಿರುವ ಕಾರಣಕ್ಕೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಕಳುಹಿಸಿರುವ ಧ್ವನಿ ಮುದ್ರಣದಲ್ಲಿ ಅವರು ತಿಳಿಸಿದ್ದರು. ಆ ವ್ಯಕ್ತಿ ಕರೆಯನ್ನು ಸ್ವೀಕರಿಸುತ್ತಿಲ್ಲದ ಕಾರಣ ಪೊಲೀಸ್ ಕಮಿಷನರ್ ಪುನಃ ಧ್ವನಿ ಮುದ್ರಣ‌ ಕಳುಹಿಸಿ, ಆತ್ಮಹತ್ಯೆ ಮಾಡಿಕೊಳ್ಳದಂತೆ

ಕಮಿಷನರ್ ಗೆ ಧ್ವನಿಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾದ ದಂಪತಿ – ಕೋವಿಡ್,ಬ್ಲ್ಯಾಕ್ ಫಂಗಸ್ ಗೆ ಹೆದರಿ ಜೀವತ್ಯಾಗ..! Read More »