ಕರಾವಳಿ

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ

ಉಡುಪಿ: ಇಲ್ಲಿನ ಬಿ.ಆರ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಯ ಮುಷ್ಕರ ಮುಗಿಯದ ಕಥೆಯಾಗಿದ್ದು, ಸಾರ್ವಜನಿಕರು, ಆಸ್ಪತ್ರೆಗೆ ಆಗಮಿಸುತ್ತಿರು ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ವೇತನ ನೀಡುವಂತೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಬಿ.ಆರ್ ಶೆಟ್ಟಿ ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದಲೇ ತೆಗೆದು ಹಾಕಿದೆ. ಹೀಗಾಗಿ ಕೆಲಸದಿಂದ ತೆಗೆದುಹಾಕಲು ಕಾರಣ ತಿಳಿಸಲು ಪಟ್ಟು ಹಿಡಿದು ಬಿ.ಆರ್.ಶೆಟ್ಟಿ ಆಸ್ಪತ್ರೆಯ ಮುಂದೆ ಸಿಬ್ಬಂದಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ […]

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ Read More »

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು|

ಮಂಗಳೂರು: ಅಫ್ಘಾನಿಸ್ತಾನ ತಾಲಿಬಾನ್‌ಗಳ ವಶವಾದ ಬೆನ್ನಲ್ಲೇ ಇಡೀ ಜಗತ್ತು ಅಫ್ಘಾನಿಸ್ತಾನದ ಕಡೆಗೆ ಕಿಸುಗಣ್ಣು ಇರಿಸಿದೆ, ಅದರೆ ಇತ್ತಾ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದೆಡೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ವಿ.ವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಪ್ಘಾನಿಸ್ತಾನದ ಬೆಳವಣಿಗೆಯ ಬಳಿಕ ನಮಗೆ ಭಾರತವು ಸುರಕ್ಷಿತ ರಾಷ್ಟ್ರವೆಂದು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ಘಾನ್ ವಿದ್ಯಾರ್ಥಿಗಳ ಹೇಳಿಕೆಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳ ಬಹುದು. ಅಪ್ಘಾನಿಸ್ತಾನದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು, ಇಷ್ಟೊಂದು

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು| Read More »

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದ ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್ ಕುಮಾರಮಂಗಲ(68) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿನ ನಿವಾಸಿಯಾಗಿರುವ ಕುಮಾರ್ ಮಾಸ್ಟರ್ ಅವರು 36 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಸೇವೆಯನ್ನು ಗುರುತಿಸಿ 1994ರಲ್ಲಿ ಜಿಲ್ಲಾ ಪ್ರಶಸ್ತಿ, 2009ರಲ್ಲಿ ರಾಜ್ಯ ಪ್ರಶಸ್ತಿ ಹಾಗೂ 2011ರಲ್ಲಿ

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ Read More »

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ರಾವ್ ಅಂಡ್ ರಾವ್ ಸರ್ಕಲ್ ರಸ್ತೆಯಲ್ಲಿರುವ ಸ್ಟಾರ್ ಟವರ್ ಬಳಿ ಆ. 24ರಂದು ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ವರದಿ ಪ್ರಕಾರ, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು 45 ವರ್ಷ ಎಂದು ಅಂದಾಜಿಸಲಾಗಿದೆ. ಮೃತನ ಬಲಗೈ `ಆರ್ ಎಸ್’, ‘ಓಂ’ ಮತ್ತು ನಕ್ಷತ್ರದ ಹಚ್ಚೆ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು

ಕುಂದಾಪುರ: ಇಬ್ಬರು ಯುವಕರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನಪ್ಪಿದ ಘಟನೆ ಕುಂದಾಪುರದ ಅಲ್ಬಾಡಿ ಗ್ರಾಮದ ಗಂಟುಬೀಲು ಬಳಿ ಸಂಭವಿಸಿದೆ. ಅಲ್ಬಾಡಿ ಗ್ರಾಮದ ಮೋಹನ್ ನಾಯಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಮೃತಪಟ್ಟ ಯುವಕರು. ಇವರಿಬ್ಬರು ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಅವರು ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಕೂಲಿ ಕೆಲಸ ಮಾಡಲು ಹೋಗಿದ್ದು, ಬಳಿಕ ತಡವಾದರೂ ಹಿಂದಿರುಗದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಿದಾಗ ಅವರ ಮೃತದೇಹ

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು Read More »

ನೇತ್ರಾವತಿ ನದಿ ನೀರನ್ನು ಮಲಿನ ಮಾಡಿದ ಆರೋಪ: 4 ಮಂದಿಯ ವಿರುದ್ಧ ಕೇಸ್

ಮಂಗಳೂರು: ಇಲ್ಲಿ ಹರಿಯುವ ನೇತ್ರಾವತಿ ನೀರನ್ನು ಮಲಿನ ಮಾಡಿದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 4 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಉಪ್ಪಿನಂಗಡಿ ನಿರಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕಿ ನವೀನ ರೈ, ಗೌರಿ ವೆಂಕಟೇಶ್ ವಸತಿ ಸಮುಚ್ಚಯದ ಮಾಲಕ ಪ್ರಕಾಶ್ ಭಟ್, ಹೊಟೇಲ್ ಲಕ್ಷ್ಮೀ ನಿವಾಸ ಸಂಸ್ಥೆಯ ಶೇಖರ್ ಮತ್ತು ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿ ಸದಾನಂದ ಪ್ರಕರಣದ ಆರೋಪಿಗಳು. ಇವರು ನದಿಗೆ ಮಲಿನ ನೀರು ಬಿಡುವ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ

ನೇತ್ರಾವತಿ ನದಿ ನೀರನ್ನು ಮಲಿನ ಮಾಡಿದ ಆರೋಪ: 4 ಮಂದಿಯ ವಿರುದ್ಧ ಕೇಸ್ Read More »

ಮಂಗಳೂರು: ಕೊನೆಗೂ ಪತ್ತೆಯಾಯಿತು ಶವದಿಂದ ನಾಪತ್ತೆಯಾದ ಡೈಮಂಡ್ – ಕಳ್ಳ ಗಂಡನಿಗೆ ಸಾತ್ ಕೊಟ್ಟು ಹೆಂಡತಿ ಈಗ ಮಾತಾಡಮ್ಮ !!

ಮಂಗಳೂರು: ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಲ್ಲಿದ್ದ ನಗರದ ಬೆಂದೂರ್ ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಾದ ಕೊಲಾಸ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ವ್ಯಕ್ತಿಯ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರದ ಕಿವಿ ಓಲೆಯನ್ನು ಕದ್ರಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಾಲ್ ಒಂದರ ಭದ್ರತಾ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಶೆಟ್ಟಿ (45) ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಅವನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲಾಗಿತ್ತಾದರೂ, ಮೃತದೇಹದ ಕಿವಿಯಲ್ಲಿನ ವಜ್ರದ ಓಲೆ

ಮಂಗಳೂರು: ಕೊನೆಗೂ ಪತ್ತೆಯಾಯಿತು ಶವದಿಂದ ನಾಪತ್ತೆಯಾದ ಡೈಮಂಡ್ – ಕಳ್ಳ ಗಂಡನಿಗೆ ಸಾತ್ ಕೊಟ್ಟು ಹೆಂಡತಿ ಈಗ ಮಾತಾಡಮ್ಮ !! Read More »

ಉಡುಪಿ: ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ – ಸ್ಥಳದಲ್ಲೇ ಸಾವುಕಂಡ ಸವಾರ

ಉಡುಪಿ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಉಚ್ಚಿಲ ಸಮೀಪದ ಮುಳೂರಿನಲ್ಲಿ ನಡೆದಿದೆ. ಸವಾರನನ್ನು ಪಡುಬಿದ್ರೆ ನಿವಾಸಿ ಚರಣ್ ಶೆಟ್ಟಿ ಮೃತ ಸ್ಕೂಟರ್ ಸವಾರ. ಇವರು ಉಡುಪಿಯಿಂದ ಪಡುಬಿದ್ರೆಯತ್ತ ಸ್ಕೂಟರ್ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರಿನ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಲಾದ ಲಾರಿಯ ಹಿಂಬದಿಗೆ ಢಿಕ್ಕಿಯಾಗಿದೆ. ಈ ಪರಿಣಾಮ ಸ್ಕೂಟರ್ ಲಾರಿಯ ಅಡಿಯಲ್ಲಿ ಸಿಲುಕಿದೆ. ಘಟನೆಯಿಂದ ಸವಾರ ಗಂಭೀರವಾಗಿ ಗಾಯಗೊಂಡಿದ್ದು,

ಉಡುಪಿ: ನಿಂತಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ – ಸ್ಥಳದಲ್ಲೇ ಸಾವುಕಂಡ ಸವಾರ Read More »

ಉಪ್ಪಿನಂಗಡಿ: ಮೀನಿನ ಅಂಗಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು ಬಳಿ ಇರುವ ಮೀನಿನ ಅಂಗಡಿಯೊಂದಕ್ಕೆ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಇದು ಅಶೋಕ್ ಎಂಬವರಿಗೆ ಸೇರಿದ ಮೀನಿನ ಅಂಗಡಿಯಾಗಿದೆ. ಭಾನುವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಿಂದ ಮೀನಿನ ಅಂಗಡಿ ಹಾಗೂ ಮಂಜುಗಡ್ಡೆ ಹಾಕಿ ಶೇಖರಿಸಿಟ್ಟ ಮೀನು ಸುಟ್ಟು ಹೋಗಿವೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು, ಪುತ್ತೂರು ತಾಲೂಕು ಶಾಸಕ ಸಂಜೀವ ಮಠಂದೂರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು ಕಿಡಿಗೇಡಿಗಳ

ಉಪ್ಪಿನಂಗಡಿ: ಮೀನಿನ ಅಂಗಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು Read More »

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ 5,58,900 ಲಕ್ಷದ ಚಿನ್ನ ಸಾಗಟ ಮಾಡುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಮುರುಡೇಶ್ವರ ನಿವಾಸಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಿದಾಗ ಆರೋಪಿಯು ದುಬೈನಿಂದ ಮಹಿಳೆಯರ ಹೇರ್ಬ್ಯಾಂಡ್ ಇನ್ನಿತರ ವಸ್ತುಗಳ ಮೂಲಕ ಚಿನ್ನ ಸಾಗಟ ಮಾಡುತ್ತಿರುವುದು ಪತ್ತೆಯಾಗಿದೆ. ಇನ್ನು ಒಟ್ಟು 115 ಗ್ರಾಂ ನ 558900 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮಂಗಳೂರು: ಮಹಿಳೆಯರ ಹೇರ್ಬ್ಯಾಂಡ್‌ನಲ್ಲಿಟ್ಟು ಚಿನ್ನ ಸಾಗಟ – ಆರೋಪಿ ವಶಕ್ಕೆ Read More »