ಕರಾವಳಿ

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು

ಬೆಳ್ತಂಗಡಿ: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಇಂದು ತಾಲೂಕಿನ ಪುಂಜಾಲಕಟ್ಟೆ ಎಂಬಲ್ಲಿ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್( 26) ಮೃತಪಟ್ಟವರು. ಆಸಿದ್ ಅವರು ಕೂಲಿ ಕಾರ್ಮಿಕರಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆ ಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರು ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು ಅವಿವಾಹಿತರಾಗಿದ್ದರು.

ಬೆಳ್ತಂಗಡಿ : ಹಾವು ಕಡಿತದಿಂದ ಯುವಕ ಸಾವು Read More »

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ

ಮಂಗಳೂರು: ರಾಜ್ಯ ಸರ್ಕಾರದ ಆದೇಶ ಹಾಗೂ ಜಿಲ್ಲೆಯ ವಿದ್ಯಮಾನಗಳನ್ನು ಗಮನಿಸಿ, ಕೋವಿಡ್-19 ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಜಿಲ್ಲೆಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ. ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ, ಚಾಲ್ತಿಯಲ್ಲಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆಗಳಿಗೆ ಹಾಜರಾಗಲು

ದ.ಕ ದಲ್ಲಿ ವೀಕೆಂಡ್ ಕರ್ಪ್ಯೂ ಇನ್ಮುಂದೆ ಹೀಗಿರಲಿದೆ.| ಹೊಸ ಮಾರ್ಗಸೂಚಿ ಪ್ರಕಟಿಸಿದ ಡಿಸಿ ಡಾ| ರಾಜೇಂದ್ರ ಕೆ.ವಿ Read More »

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಕೋರ್ಟಿಗೆ ಹಾಜರುಪಡಿಸಿದ ವೇಳೆ ನಗರದ ನ್ಯಾಯಾಲಯ ಸಂಕೀರ್ಣದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ತಲಪಾಡಿ ಕಿನ್ಯ ನಿವಾಸಿ ರವಿರಾಜ್ (32) ಕೋರ್ಟ್ ಮಹಡಿಯಿಂದ ಹಾರಿ ಸಾವು ಕಂಡವರು. ರವಿರಾಜ್ ಅವರನ್ನು ಸೋಮವಾರ ತೊಕ್ಕೊಟ್ಟಿನ ಸೆಬಾಸ್ಟಿಯನ್ ಕಾಲೇಜು ಬಳಿ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಇಂದು ಉಳ್ಳಾಲ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ

ಮಂಗಳೂರು: ಫೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ನ್ಯಾಯಾಲಯ ಸಂಕೀರ್ಣದಿಂದ ಜಿಗಿದು ಆತ್ಮಹತ್ಯೆ Read More »

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು : ಕಾರಿನ ನಂಬರ್ ಪ್ಲೇಟ್‌ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಬಳಿ ಇಂದು ನಡೆದಿದೆ. ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಆ ಭಾವಚಿತ್ರ ತೆಗೆಯುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ Read More »

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..!

ಮಂಗಳೂರು: ಮಳೆಗಾಲದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ತಿನ್ನುತ್ತಾ, ದಷ್ಟಪುಷ್ಟವಾಗಿ ಬೆಳೆದ ಬಿಡಾಡಿ ಕೋಣವದು. ಕೋಣದ ಯಜಮಾನ ಕೋಣವನ್ನು ಹಟ್ಟಿಗೆ ಸೇರಿಸದೇ ಬಿಟ್ಟು ಬಿಟ್ಟಿದ್ದ. ಕೋಣ ಊರಿನಲ್ಲೇ ಹುಲ್ಲಿದ್ದ ಜಾಗದಲ್ಲಿ ಮೇದು ಅಲ್ಲೇ ಮಲಗಿ ದಿನ ಕಳೆಯುತಿತ್ತು. ಆಹಾರ ಅರಸುತ್ತಾ, ಹುಲ್ಲು ಜಾಸ್ತಿ ಬೆಳೆದ ತೋಟಕ್ಕೆ ಕೋಣ ನುಗ್ಗಿದ್ದೇ ತಪ್ಪಾಗಿತ್ತು. ತೋಟದ ಮಾಲೀಕನ ಕೆಂಗಣ್ಣಿಗೆ ಕೋಣ ಅನಾಯಾಸವಾಗಿ ಬಿದ್ದಿತ್ತು. ಕೋಣವನ್ನು ತೋಟದಿಂದ ಓಡಿಸಲು ನಾನಾ ಪ್ರಯತ್ನ ಪಟ್ಟರೂ ಕೋಣ ಮಾತ್ರ ಜಪ್ಪಯ್ಯ ಅಂದ್ರೂ ತೋಟ ಬಿಡಲಿಲ್ಲ. ಅಂತಿಮವಾಗಿ ಮಾಲೀಕ

ಕೋಣವನ್ನು ಸುಪಾರಿ ಪಡೆದು ಕೊಂದ ಪಾತಕಿಗಳು ಕಂಬಿ ಹಿಂದೆ| ಮನುಷ್ಯತ್ವ ಮರೆತ ನರರಾಕ್ಷಸರು..! Read More »

ಉಡುಪಿ: ಹಾಡುಹಗಲೇ ಯುವತಿಗೆ ಚೂರಿ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕ – ಇಬ್ಬರು ಗಂಭೀರ

ಉಡುಪಿ: ಹಾಡಹಗಲೇ ಯುವಕನೊಬ್ಬ ಯುವತಿಗೆ ಕುತ್ತಿಗೆ ಚೂರಿಯಿಂದ ಸೀಳಿ ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಸಂತೆಕಟ್ಟೆಯ ಪೆಟ್ರೊಲ್ ಬಂಕ್ ಬಳಿ ನಡೆದಿದೆ. ಹುಡುಗಿ ಅಂಬಾಗಿಲು ಮೂಲದವರೆಂದು ತಿಳಿದು ಬಂದಿದೆ. ಆಕೆ ಸ್ಕೂಟರ್‍ನಲ್ಲಿ ಸಂಚರಿಸುತ್ತಿದ್ದ ಯುವಕನು ಆಕೆಯ ಕುತ್ತಿಗೆ ಸೀಳಿದ್ದು, ಬಳಿಕ ತನ್ನ ಕುತ್ತಿಗೆಯನ್ನು ಸೀಳಿಕೊಂಡಿದ್ದು ಇಬ್ಬರೂ ಗಂಭೀರ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇನ್ನು ಈ ಇಬ್ಬರೂ ಸ್ಥಳೀಯರೇ ಎಂದು ಹೇಳಲಾಗಿದೆ. ಯುವಕನನ್ನು ಅಲೆವೂರು ನಿವಾಸಿ ಸಂದೇಶ್ ಕುಲಾಲ್ ಎಂದು ಗುರುತಿಸಲಾಗಿದ್ದು,

ಉಡುಪಿ: ಹಾಡುಹಗಲೇ ಯುವತಿಗೆ ಚೂರಿ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕ – ಇಬ್ಬರು ಗಂಭೀರ Read More »

ರಾಷ್ಟ್ರೀಯ ಶಿಕ್ಷಣ ‌ನೀತಿಗೆ ವಿರೋಧ|ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಮಂಗಳೂರಿನಲ್ಲಿ ಮುಖಭಂಗ|ಹೊಸ ಶಿಕ್ಷಣ ನೀತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಘೇರಾವ್|

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರು ಮಂಗಳೂರು ಕೋಣಾಜೆ ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ಉನ್ನತ ಶಿಕ್ಷಣ ಸಚಿವರಿಗೆ ಕಾರ್ಯಕ್ರಮದಲ್ಲಿ ತೀವ್ರ ಮುಖಭಂಗವಾಗಿದ್ದು, ಸಮಾರಂಭಕ್ಕೆ ಪ್ರತಿಭಟನಾಕಾರರು ಘೇರಾವ್ ಕೂಗಿದ್ದಾರೆ. ಮಂಗಳಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಸಿಎಫ್ ಐ ಕಾರ್ಯಕರ್ತರು ನೂತನ ನೀತಿಯಲ್ಲಿ ಮಧ್ಯಯುಗ ಇತಿಹಾಸ ತೆಗೆದು ಹಾಕಲಾಗಿರುವ ನೀತಿ ಖಂಡಿಸಿದ್ದಾರೆ. ಪ್ರಾಚೀನ ಹಾಗೂ ಈಗಿನ ಇತಿಹಾಸವನ್ನು ಕಲಿಸಲಾಗುತ್ತಿದೆ. ಪ್ರಾಚೀನ ಯುಗದ ಇತಿಹಾಸದಲ್ಲಿ ಮೌಢ್ಯತೆ ತುಂಬಿದೆ ಎಂದು

ರಾಷ್ಟ್ರೀಯ ಶಿಕ್ಷಣ ‌ನೀತಿಗೆ ವಿರೋಧ|ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಗೆ ಮಂಗಳೂರಿನಲ್ಲಿ ಮುಖಭಂಗ|ಹೊಸ ಶಿಕ್ಷಣ ನೀತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಘೇರಾವ್| Read More »

ಉಡುಪಿ ಡಿ ಸಿ ಜಗದೀಶ್ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾಜ್

ಉಡುಪಿ : ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ರವಿವಾರ ಆದೇಶ ಹೊರಡಿಸಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರ್ಗಿ ಇದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮ ರಾವ್‌ ಅವರನ್ನು ನೇಮಕ ಮಾಡಲಾಗಿದೆ. ಜಿ ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಳಿಸಲಾಗಿದೆ. 2019 ರಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡಿದ್ದ, ಜಿ ಜಗದೀಶ್ ಅವರು, ಕೋವಿಡ್ ಸಂಕಷ್ಟ ಹಾಗೂ ಮಳೆಯಿಂದಾದ ಪ್ರವಾಹ ಸಂದರ್ಭದಲ್ಲಿ ಯಶಸ್ವಿಯಾಗಿ ಆಡಳಿತವನ್ನು ನಿಭಾಯಿಸಿದ್ದರು. ಜಿ. ಜಗದೀಶ್

ಉಡುಪಿ ಡಿ ಸಿ ಜಗದೀಶ್ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಕೂರ್ಮರಾಜ್ Read More »

ಪುತ್ತೂರು| ದೇವಾಲಯದ ಗದ್ದೆಯಲ್ಲಿ ಅನ್ಯಮತೀಯರಿಗೆ ಪಾರ್ಕಿಂಗ್ ಅವಕಾಶವಿಲ್ಲ| ವಿವಾದದ ಕಿಡಿ ಹಬ್ಬಿಸಿದ ವ್ಯವಸ್ಥಾಪನಾ ಸಮಿತಿ ಆದೇಶ

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹೊರಡಿಸಿರುವ ಆದೇಶ, ಇದೀಗ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಇನ್ನುಮುಂದೆ ಹಿಂದೂ ಭಕ್ತರಿಗೆ ಮಾತ್ರ ಪಾರ್ಕಿಂಗ್ ಮಾಡುವುದಕ್ಕೆ ಮಾತ್ರ ಅವಕಾಶ ಎಂದು ಆದೇಶದ ಫ್ಲೆಕ್ಸ್ ಹಾಕಲಾಗಿದ್ದು, ಈ ಆದೇಶ ವಿವಾದದ ಕಿಡಿ ಹಬ್ಬಿಸುವ ಲಕ್ಷಣಗಳು ಕಂಡುಬರುತ್ತಿದೆ. ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯು ಪ್ರಕಟಣೆ ಹೊರಡಿಸಿದ್ದು, ದೇವಾಲಯ ಮುಂಭಾಗದ ವಿಶಾಲವಾದ ದೇವರಮಾರು ಗದ್ದೆಯಲ್ಲಿ ಮುಂದಿನ ದಿನಗಳಲ್ಲಿ ಹಿಂಧೂ ಭಕ್ತರಿಗೆ ಮಾತ್ರ ವಾಹನ ನಿಲುಗಡೆಗೆ ಅವಕಾಶ

ಪುತ್ತೂರು| ದೇವಾಲಯದ ಗದ್ದೆಯಲ್ಲಿ ಅನ್ಯಮತೀಯರಿಗೆ ಪಾರ್ಕಿಂಗ್ ಅವಕಾಶವಿಲ್ಲ| ವಿವಾದದ ಕಿಡಿ ಹಬ್ಬಿಸಿದ ವ್ಯವಸ್ಥಾಪನಾ ಸಮಿತಿ ಆದೇಶ Read More »

ದ.ಕ ದಲ್ಲಿ ಸೆ.1 ರಿಂದ ಪ.ಪೂರ್ವ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ ಡಿ.ಸಿ

ಮಂಗಳೂರು, ಆ.28: ದ.ಕ.ಜಿಲ್ಲೆಯಲ್ಲಿ ಸೆ.1ರಿಂದ ದ್ವಿತೀಯ ಪಿಯು ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸಲು ದ.ಕ. ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಪ್ರಥಮ ಪಿಯು ತರಗತಿಯನ್ನು ಪಿಯು ಡಿಡಿ ಹಾಗೂ ಪದವಿ/ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಕಾಲೇಜಿನ ಜಂಟಿ ನಿರ್ದೇಶಕರ ಪೂರ್ವಾನುಮತಿ ಪಡೆದು ಸೆ.15ರ ಬಳಿಕ ತರಗತಿ ಆರಂಭಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ)ವನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಎಂದು ಡಿಸಿ ಆದೇಶದಲ್ಲಿ

ದ.ಕ ದಲ್ಲಿ ಸೆ.1 ರಿಂದ ಪ.ಪೂರ್ವ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ ಡಿ.ಸಿ Read More »