ಕರಾವಳಿ

ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿದ ಕಿಡಿಗೇಡಿಗಳು| ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾದ ಕರಾವಳಿ|

ಬೆಳ್ತಂಗಡಿ : ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡುಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ. ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು 10 ವರ್ಷ ಪ್ರಾಯದ ಎಮ್ಮೆಯನ್ನು ಮನೆ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಸಮೀಪದ ಫಲಸ್ತಡ್ಕ ಎಂಬಲ್ಲಿ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಎಮ್ಮೆಯ ಮೈಮೇಲೆ ಗುಂಡಿನ ಗಾಯಗಳು ಕಂಡುಬಂದಿದ್ದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದೆಯೇ […]

ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿದ ಕಿಡಿಗೇಡಿಗಳು| ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾದ ಕರಾವಳಿ| Read More »

ಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ| ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 14 ಮಂದಿಗೆ 2 ವರ್ಷ ಜೈಲು|

ಸುಳ್ಯ: 2014ರ ಚುನಾವಣೆ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮರ್ಕಂಜದ ಕುದ್ಕುಳಿ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಗೆ ಸುಳ್ಯ ನ್ಯಾಯಾಲಯ ಜೈಲುವಾಸದ ತೀರ್ಪು ನೀಡಿದೆ. ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ ಕಾಲಿನಿಂದ ತನ್ನ

ಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ| ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 14 ಮಂದಿಗೆ 2 ವರ್ಷ ಜೈಲು| Read More »

ಸುಳ್ಯ: ಸಂಬಂಧಿಕನೆಂದು ಬಂದವನು ಪತ್ನಿಯ ಜೊತೆ ಸಂಬಂಧ ಬೆಳೆಸಿ ಕರೆದೊಯ್ದ| ಅವನೊಂದಿಗೆ ಹೋದವಳು ಠಾಣೆಗೆ ಬಂದು ಹೇಳಿದ್ದೇನು? ಉಂಡೂಹೋದ ಕೊಂಡೂ ಹೋದ…!

ಸುಳ್ಯ: ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಪರಿಚಿತ ಯುವಕನೊಂದಿಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸೋಮವಾರ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪತಿಯೊಂದಿಗೆ ತೆರಳಲು ಅಸಮ್ಮತಿ ಸೂಚಿಸಿರುವುದಾಗಿ ತಿಳಿದುಬಂದಿದೆ. ಸುಳ್ಯ ಜಯನಗರ ಕೊಯಿಂಗೋಡಿ ಸಮೀಪದ ನಿವಾಸಿ ಸಮಿತ್(ಸಂಧ್ಯಾ) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕನೆಂದು ಮನೆಗೆ ಬರುತ್ತಿದ್ದ ಪ್ರದೀಪ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆಂದು ಆಕೆಯ ಪತಿ ಮನೋಜ್ ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್‌ರವರು ಪ್ರದೀಪ್ ಹಾಗೂ ಸಂದ್ಯಾಳನ್ನು ಠಾಣೆಗೆ

ಸುಳ್ಯ: ಸಂಬಂಧಿಕನೆಂದು ಬಂದವನು ಪತ್ನಿಯ ಜೊತೆ ಸಂಬಂಧ ಬೆಳೆಸಿ ಕರೆದೊಯ್ದ| ಅವನೊಂದಿಗೆ ಹೋದವಳು ಠಾಣೆಗೆ ಬಂದು ಹೇಳಿದ್ದೇನು? ಉಂಡೂಹೋದ ಕೊಂಡೂ ಹೋದ…! Read More »

ಸುಳ್ಯ| ನಾಪತ್ತೆಯಾಗಿ ಎರಡು ದಿನ ಕಳೆದರೂ‌ ಪತ್ತೆಯಾಗದ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ| ಸಾಲಬಾಧೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದರಾ ರಾಜೇಶ್ ಗುಂಡಿಗದ್ದೆ?

ಸುಳ್ಯ : ಬೆಳ್ಳಾರೆಯ ಉದ್ಯಮಿ ರಾಜೇಶ್ ಗುಂಡಿಗದ್ದೆ (47) ಯವರು ಸೆ. 4 ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ವಿನಯಶ್ರೀಯವರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎರಡು ದಿನ ಕಳೆದರೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೆ. 5 ರಂದು ರಾಜೇಶ್ ಪತ್ನಿ ವಿನಯಶ್ರೀ ಅವರು ಠಾಣೆಗೆ ದೂರು ನೀಡಿದ್ದು, ಸುಳ್ಯ ಪೇಟೆಗೆ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅದರಲ್ಲಿ ತಿಳಿಸಲಾಗಿದೆ.

ಸುಳ್ಯ| ನಾಪತ್ತೆಯಾಗಿ ಎರಡು ದಿನ ಕಳೆದರೂ‌ ಪತ್ತೆಯಾಗದ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ| ಸಾಲಬಾಧೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದರಾ ರಾಜೇಶ್ ಗುಂಡಿಗದ್ದೆ? Read More »

ಉಪ್ಪಿನಂಗಡಿ‌| ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಭೀಕರ ಅಪಘಾತ| ಯಮಸ್ವರೂಪಿಯಾದ ಲಾರಿ ಹಾಗೂ ಕಂಟೈನರ್| ಇಬ್ಬರು ದುರ್ಮರಣ

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಹಾಗೂ ನೆಲ್ಯಾಡಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ‌ ಇಬ್ಬರು ದುರ್ಮರಣ ಹೊಂದಿದ್ದಾರೆ. ಉಪ್ಪಿನಂಗಡಿಯ ಬೈಪಾಸ್ ನಲ್ಲಿ ಬುಲೆಟ್ ಟ್ಯಾಂಕರ್ ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಹಾಗೂ ಅವನ ತಾಯಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಅಪಘಾತವೂ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇದೇ ಹೆದ್ದಾರಿಯ ನೆಲ್ಯಾಡಿ ಸಮೀಪ ಲಾರಿ ಹಾಗೂ

ಉಪ್ಪಿನಂಗಡಿ‌| ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಭೀಕರ ಅಪಘಾತ| ಯಮಸ್ವರೂಪಿಯಾದ ಲಾರಿ ಹಾಗೂ ಕಂಟೈನರ್| ಇಬ್ಬರು ದುರ್ಮರಣ Read More »

ಬಿಸಿ ಬಿಸಿ ಪಾಯಸ ತಿಂದು ಬಾಯಿ ಸುಟ್ಕೋತೀರಾ? ತಣಿಯೋವರೆಗೂ ಕಾಯ್ಬೇಕಲ್ವೇ? ಡಿ.ಸಿ ರಾಜೇಂದ್ರ ಆಡಿಯೊ ವೈರಲ್

ಮಂಗಳೂರು, ಸೆ.5 : ಪಾಯಸ ಆಗೋವರೆಗೆ ಇದ್ದವರು ಆರೋ ತನಕ ಇರಬಾರದೇ ? ಪಾಯಸ ಆಗಿದೆ, ಅದನ್ನು ಬಿಸಿ ಬಿಸಿ ಇರುವಾಗಲೇ ತಿಂದ್ಬಿಟ್ಟು ಬಾಯಿ ಸುಟ್ಟುಕೊಳ್ಳೋದು ಯಾಕೆ ? ಹೀಗೆಂದು ಗಾದೆ ಮಾತಿನ ಮೂಲಕ ದಕ್ಷಿಣ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ವೀಕೆಂಡ್ ಕರ್ಫ್ಯೂ ಬಗ್ಗೆ ಪ್ರಶ್ನಿಸಿ ಕರೆ ಮಾಡಿದ ವ್ಯಕ್ತಿಗೆ ಸಮಾಧಾನ ಚಿತ್ತದಿಂದ ಉತ್ತರಿಸಿದ ಆಡಿಯೋ ಈಗ ವೈರಲ್ ಆಗಿದೆ. ರೆಡಿಮೇಡ್ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಮಾರಾಟದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಅನ್ನುವವರು

ಬಿಸಿ ಬಿಸಿ ಪಾಯಸ ತಿಂದು ಬಾಯಿ ಸುಟ್ಕೋತೀರಾ? ತಣಿಯೋವರೆಗೂ ಕಾಯ್ಬೇಕಲ್ವೇ? ಡಿ.ಸಿ ರಾಜೇಂದ್ರ ಆಡಿಯೊ ವೈರಲ್ Read More »

ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…?

ಪುತ್ತೂರು, ಸೆ.5 : ರೈಲ್ವೇ ಹಳಿಗೆ ಅಳವಡಿಸಿರುವ ಜಾಯಿಂಟ್ ಕ್ಲಿಪ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ರೈಲು ಹಳಿಯಿಂದ ಕಬ್ಬಿಣದ ಕ್ಲಿಪ್​ಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಫ್ತಿಯಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಮಫ್ತಿಯಲ್ಲಿದ್ದ ರೈಲ್ವೇ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ

ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…? Read More »

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು|

ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರಸ್ಥೆಯೋರ್ವರ ಮೇಲೆ ಅಲ್ಲೇ ಪಕ್ಕದಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿ ಈ ಸಂಬಂಧ ಇತ್ತಂಡದ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಸೆ.5ರಂದು ನಡೆದಿದೆ. ಮುಳಿಮಜಲಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ಎಂಬವರ ಪತ್ನಿ ಪ್ರಮೋದ ಎಂಬವರ ಮೇಲೆ ಸಮೀಪದಲ್ಲಿ ಮಾಂಸದಂಗಡಿ ನಡೆಸುತ್ತಿರುವ ರಾಜುಮ್ಯಾಥ್ಯೂ ಎಂಬವರು ವೀಡಿಯೋ ಮಾಡಿ ಹಲ್ಲೆ ನಡೆಸಿದ್ದಾರೆ ,ಅಲ್ಲದೆ ರಕ್ಷಣೆಗೆ ಬಂದ ತನ್ನ ಮಗಳ ಮೇಲೆ ಕೈ

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು| Read More »

ಅಮ್ಮನ ನೆನಪಿಗಾಗಿ ಗುಡಿಕಟ್ಟಿದ ಮಗ| ಕಾಪುವಿನ ಈ ತಾಯಿ ಈಗ ಗುಡಿಯೊಳಗಿನ ದೇವತೆ

ಉಡುಪಿ: ತಾಯಿ, ಹಿರಿಯರ ನೆನಪಿಗಾಗಿ ಕಾಪು ಗರಡಿ ರಸ್ತೆಯ ಬದಿಯಲ್ಲಿರುವ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಮಗನೋರ್ವ ಗುಡಿಕಟ್ಟಿದ್ದು, ತಾಯಿಯ ಶ್ರೇಷ್ಟತೆಯನ್ನು ಲೋಕಕ್ಕೆ ಸಾರಿರುವ ವಿಶೇಷ ಕಾರ್ಯ ವೈರಲ್ ಆಗಿದೆ. ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೊಡಿಯ ಗರಡಿ ಮನೆಯ ಸದಸ್ಯರಾದ ಗೀತಾ ಯಾದವ್ ಪೂಜಾರಿ , ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, ಮುತ್ತಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ ಅವರ ಮೂರ್ತಿಯನ್ನು ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ

ಅಮ್ಮನ ನೆನಪಿಗಾಗಿ ಗುಡಿಕಟ್ಟಿದ ಮಗ| ಕಾಪುವಿನ ಈ ತಾಯಿ ಈಗ ಗುಡಿಯೊಳಗಿನ ದೇವತೆ Read More »

ಬಂಟ್ವಾಳ: ಬಾಲಕನ ಬಲಿ ಪಡೆದ ಕಲ್ಲಿನ ಕೋರೆ

ಬಂಟ್ವಾಳ: ನೀರು ತುಂಬಿದ್ದ ಕಲ್ಲಿನ ಕೋರೆಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡಿನಲ್ಲಿ ನಡೆದಿದೆ. ಸಾಧಿಕ್ ಎಂಬವರ ಪುತ್ರ 6ನೇ ತರಗತಿ ವಿದ್ಯಾರ್ಥಿ ಸವಾದ್ (12) ಮೃತ ಬಾಲಕ. ಈತ ಮತ್ತು ಸ್ಥಳೀಯ ಮಕ್ಕಳು ಸೇರಿಕೊಂಡು ಕೆಂಪು ಕಲ್ಲಿನ ಕೋರೆ ಬಳಿ ಆಟವಾಡುತ್ತಿದ್ದರು. ಇದೇ ವೇಳೆ ಸವಾದ್ ಎಂಬಾತ ಕಾಲು ಜಾರಿ ನೀರು ತುಂಬಿದ್ದ ಕಲ್ಲಿನ ಕೋರೆಯ ಗುಂಡಿಗೆ ಬಿದ್ದಿದ್ದಾನೆ. ತಕ್ಷಣ ಜೊತೆಗಿದ್ದ ಬಾಲಕರು ಆತನ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ.

ಬಂಟ್ವಾಳ: ಬಾಲಕನ ಬಲಿ ಪಡೆದ ಕಲ್ಲಿನ ಕೋರೆ Read More »