ಕರಾವಳಿ

ಸೆ.17ರಿಂದ 8-10, ಹಾಗೂ ಸೆ.20ರಿಂದ 6 ಮತ್ತು 7ನೇ ತರಗತಿಗಳ ಪ್ರಾರಂಭಕ್ಕೆ ದ.ಕ ಜಿಲ್ಲಾಧಿಕಾರಿ ‌ಸೂಚನೆ

ಮಂಗಳೂರು, ಸೆ.13: ದ.ಕ. ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಶಾಲೆಗಳನ್ನು ತೆರೆಯಬೇಕು. ಮಕ್ಕಳಿಗೆ ತೊಂದರೆಯಾಗ ದಂತೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶಾಲೆಗಳನ್ನು ತೆರೆಯುವ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೆ.17ರಂದು 8,9 ಮತ್ತು 10 ನೇ ತರಗತಿಗಳನ್ನು ಆರಂಭಿಸಿ, ಸೆ.20ರಂದು 6 ಮತ್ತು 7ನೇ ತರಗತಿಗಳನ್ನು ಆರಂಭಿಸಲು ಸೂಚಿಸಿದರು. ಜೊತೆಗೆ ಎಲ್ಲ ಪ್ರಥಮ ಪಿ.ಯು.ಸಿ ತರಗತಿಗಳನ್ನು ಆರಂಭಿಸಲು ತಿಳಿಸಿದರು. […]

ಸೆ.17ರಿಂದ 8-10, ಹಾಗೂ ಸೆ.20ರಿಂದ 6 ಮತ್ತು 7ನೇ ತರಗತಿಗಳ ಪ್ರಾರಂಭಕ್ಕೆ ದ.ಕ ಜಿಲ್ಲಾಧಿಕಾರಿ ‌ಸೂಚನೆ Read More »

ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಣಿ

ಮಂಗಳೂರು: ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಇದರಲ್ಲಿ ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವ ದೇಶಕ್ಕೆ ಪ್ರಥಮ ಶ್ರೇಣಿ ಪಡೆದಿದ್ದಾರೆ. ರುತ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರಾಂಕ್ ಪಡೆದ ಪ್ರಥಮ ಮಂಗಳೂರಿಗರಾಗಿದ್ದಾರೆ, ಈಕೆ ಮಂಗಳೂರಿನ ರೋಸಿ ಮಾರಿಯಾ ಡಿಸಿಲ್ಲಾ ಮತ್ತು ರಫರ್ಟ್ ಡಿಸಿಲ್ಲಾ ದಂಪತಿಯ ಪುತ್ರಿ. ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಶ್ರೇಣಿ ಪಡೆದ ರುತ್ ಇತಿಹಾಸ ಸೃಷ್ಟಿಸಿದ್ದು, ಕಳೆದ ಕೆಲ ವರ್ಷಗಳಿಂದ ಪರೀಕ್ಷೆಯನ್ನು

ಮಂಗಳೂರಿನ ರುತ್ ಕ್ಲ್ಯಾರ್ ಡಿಸಿಲ್ವಾ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಶ್ರೇಣಿ Read More »

ವೇಣೂರು: ಬಿಜೆಪಿ ಮುಖಂಡ ರಾಮ್ ಪ್ರಸಾದ್ ಮರೋಡಿ ನಿಧನ

ಮೂಡುಬಿದಿರೆ: ವೇಣೂರು‌ ಸಮೀಪದ ಮರೋಡಿ ಗ್ರಾಮದ ಪಲಾರ ನಿವಾಸಿ, ಬಿಜೆಪಿ ಮುಖಂಡ ರಾಮ ಪ್ರಸಾದ್‌‌ ಮರೋಡಿ (37) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ,13ರ ಸೋಮವಾರದಂದು ನಿಧನರಾಗಿದ್ದಾರೆ. ರಾಮ ಪ್ರಸಾದ್‌ ಅವರು ಕೆಲ ದಿನಗಳ ಹಿಂದೆ ಜಾಂಡಿಸ್‌ ಖಾಯಿಲೆಯಿಂದ ಬಳಲುತ್ತಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ರಾಮ್‌ ಪ್ರಸಾದ್‌ ಅವರು ಬಜರಂಗದಳದ ಮೇಣೂರು ಪ್ರಖಂಡ ಸಂಚಾಲಕರಾಗಿದ್ದರು. ಇವರು ಪಲಾರಗೋಳಿ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ

ವೇಣೂರು: ಬಿಜೆಪಿ ಮುಖಂಡ ರಾಮ್ ಪ್ರಸಾದ್ ಮರೋಡಿ ನಿಧನ Read More »

ನೆಲ್ಯಾಡಿ: ಉದನೆಯ ಗಣಪತಿಕಟ್ಟೆಗೆ ಹಾನಿಗೊಳಿಸಿದ ಕಿಡಿಗೇಡಿಗಳು| ಸ್ಥಳಕ್ಕೆ ಹಿಂದೂ ಮುಖಂಡರು ದೌಡು|

ನೆಲ್ಯಾಡಿ: ಇಲ್ಲಿಗೆ ಸಮೀಪದ ಉದನೆಯ ಗಣಪತಿ ಕಟ್ಟೆಯನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಸೆ.10 ರ ರಾತ್ರಿ ನಡೆದಿದೆ. ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.10ರಂದು ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಆದರೆ ರಾತ್ರಿ ವೇಳೆ ಕಿಡಿಗೇಡಿಗಳು ಬಾಳೆಗಿಡಗಳನ್ನು ಹಾಳುಮಾಡಿ ಮೆಟ್ಟಿಲನ್ನು ಹಾನಿಗೊಳಿಸಿದ್ದಾರೆ. ಕಲ್ಲು ಎತ್ತಿಹಾಕಿ ಮೆಟ್ಟಿಲು ಹಾಗೂ ಮೆಟ್ಟಿಲಿನ ಬದಿಗಳನ್ನು ಹಾನಿಗೊಳಿಸಿರುವುದಾಗಿ ವರದಿಯಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ

ನೆಲ್ಯಾಡಿ: ಉದನೆಯ ಗಣಪತಿಕಟ್ಟೆಗೆ ಹಾನಿಗೊಳಿಸಿದ ಕಿಡಿಗೇಡಿಗಳು| ಸ್ಥಳಕ್ಕೆ ಹಿಂದೂ ಮುಖಂಡರು ದೌಡು| Read More »

ಪಣಂಬೂರು: ದೋಣಿ ದುರಂತ – ನಾಲ್ವರು ಮೀನುಗಾರರ ರಕ್ಷಣೆ , ಓರ್ವ ನಾಪತ್ತೆ

ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿ ದುರಂತ ಸಂಭವಿಸಿ ಮೀನುಗಾರರು ನೀರುಪಾಲಾದ ಘಟನೆ ನಡೆದಿದೆ. ಅಝರ್ ಎಂಬವರ ಮಾಲಕತ್ವದ ಗಿಲ್ ನೆಟ್ ಬೋಟ್ ಇದಾಗಿದ್ದು ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದು ಈ ಪೈಕಿ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಪೈಕಿ ಓರ್ವ ನಾಪತ್ತೆಯಾಗಿದ್ದು ಆತನನ್ನು ಶರೀಫ್ ಎಂದು ಗುರುತಿಸಲಾಗಿದೆ. ಸದ್ಯ ದೋಣಿಯನ್ನು ದಡಕ್ಕೆ ತರಲಾಗಿದೆ.

ಪಣಂಬೂರು: ದೋಣಿ ದುರಂತ – ನಾಲ್ವರು ಮೀನುಗಾರರ ರಕ್ಷಣೆ , ಓರ್ವ ನಾಪತ್ತೆ Read More »

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕೊಂಕಣ್ ರೈಲ್ವೆ ಯಿಂದ ವಿಶೇಷ ಟ್ರಿಪ್

ಉಡುಪಿ: ಗಣೇಶ ಚತುರ್ಥಿ ಪ್ರಯುಕ್ತ ಕೊಂಕಣ ರೈಲ್ವೆ 224 ವಿಶೇಷ ಟ್ರಿಪ್ ಗಳನ್ನು ಪ್ರಾರಂಭಿಸಿ, ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಕೊರೋನಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ನಿರ್ಗಮನ ಪ್ರಯಾಣಿಕರ ಉಷ್ಣತೆ ಪರಿಶೀಲನೆ, ಪ್ರಥಮ-ಚಿಕಿತ್ಸಾ ವೈದ್ಯಕೀಯ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ನಿಲ್ದಾಣಗಳಲ್ಲಿ ಆಹಾರ ಮಳಿಗೆಗಳನ್ನು ತೆರೆಯಲು ಹಾಗೂ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಆರ್ ಪಿಎಫ್ ಸಿಬ್ಬಂದಿಯೊಂದಿಗೆ ಹೆಚ್ಚುವರಿ ರೈಲ್ವೆ ಭದ್ರತಾ ಸಿಬ್ಬಂದಿಯನ್ನು ಜನಸಂದಣಿ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ

ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕೊಂಕಣ್ ರೈಲ್ವೆ ಯಿಂದ ವಿಶೇಷ ಟ್ರಿಪ್ Read More »

ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ದೌರ್ಜನ್ಯ – ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ

ಪುತ್ತೂರು: ಪುತ್ತೂರು ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ಮರ,ಮರಳು ಲೂಟಿಕೋರರು ತಕರಾರು ಎತ್ತಿ ದೌರ್ಜನ್ಯ ನಡೆಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾರೆ. ಕಡಬ ತಾಲೂಕಿನ ಕಾಣಿಯೂರಿನ ನಿವಾಸಿಗಳಾದ ಶಿವರಾಮ ಗೌಡ ಮತ್ತು ಬೇಬಿ ದೌರ್ಜನ್ಯಕ್ಕೊಳಗಾದವರು, ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ತಮ್ಮ ಸುರಕ್ಷತೆಗಾಗಿ ಮನೆಯ ಮುಂದೆ ವರ್ಷಗಳ ಹಿಂದೆ ಸಿಸಿ ಕ್ಯಾಮರಾ ಆಳವಡಿಸಿದ್ದರು. ಆದರೆ ಈ ಭಾಗದಲ್ಲಿ ಅಕ್ರಮವಾಗಿ ಮರ, ಮರಳು ದಂಧೆ ಹೆಚ್ಚಾಗಿ ನಡೆಯುತ್ತಿದ್ದು

ಮನೆಗೆ ಸಿಸಿ ಕ್ಯಾಮರಾ ಹಾಕಿದ್ದಕ್ಕೆ ಮನೆ ಮಂದಿ ಮೇಲೆ ದೌರ್ಜನ್ಯ – ನೊಂದ ಶಿಕ್ಷಕ ದಂಪತಿಗಳು ನ್ಯಾಯಕ್ಕಾಗಿ ಮೊರೆ Read More »

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ ಪ್ರಕರಣ – ವಿಹಿಂಪದಿಂದ ಲವ್ ಜಿಹಾದ್ ಆರೋಪ

ಮಂಗಳೂರು: ನಗರದ ಬಲ್ಲಾಳ್‌ಬಾಗ್‌ನಿಂದ ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ನಗದು ಸಹಿತ ನಾಪತ್ತೆಯಾದ ಘಟನೆಯೂ ಲವ್ ಜಿಹಾದ್ ಪ್ರಕರಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಮೂಲತಃ ಗದಗ ನಿವಾಸಿಗಳಾಗಿದ್ದು, ಬರ್ಕೆ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಚ್‌ಮನ್‌ ಆಗಿರುವ ಯಶೋಧಾ ಎಂಬವರ ಪುತ್ರಿ ರೇಷ್ಮಾ ( 21) ಅವರ ನಿಶ್ಚಿತಾರ್ಥ ಆ. 21 ರಂದು ನಡೆದಿದ್ದು, ನಿಶ್ಚಿತಾರ್ಥ ಸಂದರ್ಭ ಗಂಡಿನ ಮನೆಯವರು ನೀಡಿದ ಚಿನ್ನಾಭರಣ ಸಮೇತ ನಾಪತ್ತೆಯಾಗಿದ್ದರು. ಈ ಪ್ರಕರಣವನ್ನು ವಿಹಿಂಪ ಖಂಡಿಸುತ್ತದೆ. ಯುವತಿ ನಾಪತ್ತೆಯಾದ ಮನೆಗೆ

ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ ಪ್ರಕರಣ – ವಿಹಿಂಪದಿಂದ ಲವ್ ಜಿಹಾದ್ ಆರೋಪ Read More »

ಮಂಗಳೂರು: ಮಗಳು ಮಾಡಿದ ತಪ್ಪಿಗೆ ಮೊಮ್ಮಗಳನ್ನು ‘ಜಿಹಾದ್’ ಬಲೆಗೆ ಬೀಳಿಸಿದ ಅಜ್ಜ| ನಿಶ್ಚಿತಾರ್ಥವಾಗಿ ಪರಾರಿಯಾದ ಯುವತಿಯ ಅಸಲಿ ಕಥೆ ಬಲು ವಿಚಿತ್ರ

ಮಂಗಳೂರು: ಕರಾವಳಿಯಲ್ಲಿ ಲವ್‌ ಜಿಹಾದ್‌ ಎಂಬ ಶಬ್ದ ಭಾರಿ ಬೆಳಕಿಗೆ ಬರುತ್ತಿದೆ. ಮುಸ್ಲಿಂ ಹುಡುಗರು, ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ನಂತರ ಮದುವೆಯ ಹೆಸರಿನಲ್ಲಿ ಹೆಣ್ಣುಮಕ್ಕಳ ಧರ್ಮ ಬದಲಿಸಿ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಸಾಕಷ್ಟಿದೆ. ಆದರೆ ಮಂಗಳೂರಿನಲ್ಲೊಂದು ಕುತೂಹಲದ ವಿಚಿತ್ರ ಲವ್ ಜಿಹಾದ್ ನಡೆದಿದೆ. ಹಳೆಯ ಸೇಡು ತೀರಿಸಿಕೊಳ್ಳಲು ಮಗಳ ಮಗಳನ್ನೇ ರಾತ್ರೋರಾತ್ರಿ ಎತ್ತಾಕೊಂಡು ಹೋಗಿರುವ ಘಟನೆ ನಡೆದಿದೆ.ಮುಸ್ಲಿಂ ಧರ್ಮದ ಯುವತಿ ಹಿಂದೂ ಧರ್ಮದ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಕಾರಣ, ಸುಮಾರು 22 ವರ್ಷ

ಮಂಗಳೂರು: ಮಗಳು ಮಾಡಿದ ತಪ್ಪಿಗೆ ಮೊಮ್ಮಗಳನ್ನು ‘ಜಿಹಾದ್’ ಬಲೆಗೆ ಬೀಳಿಸಿದ ಅಜ್ಜ| ನಿಶ್ಚಿತಾರ್ಥವಾಗಿ ಪರಾರಿಯಾದ ಯುವತಿಯ ಅಸಲಿ ಕಥೆ ಬಲು ವಿಚಿತ್ರ Read More »

ಇನ್ನೆರಡು ತಿಂಗಳು ದೇವರ ನಾಡಿಗೆ ಹೋಗುವಂತಿಲ್ಲ| ಕೇರಳಕ್ಕೆ ಹೋಗುವುದು, ಬರುವುದು ನಿರ್ಬಂಧಿಸಿ ದ.ಕ ಡಿಸಿ ಆದೇಶ|

ಮಂಗಳೂರು : ಕೇರಳದಲ್ಲಿ ಕೊರೊನಾ ಮತ್ತು ನಿಫಾ ವೈರಸ್ ಹರಡುತ್ತಿರುವುದರಿಂದ ಕೇರಳ ಕಡೆಯಿಂದ ಬರುವವರನ್ನು ಮತ್ತು ಅಲ್ಲಿಗೆ ತೆರಳುವವರನ್ನು ಸಂಪೂರ್ಣವಾಗಿ ಎರಡು ತಿಂಗಳ ಕಾಲ ನಿರ್ಬಂಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮುಂದಿನ ಎರಡು ತಿಂಗಳ ಕಾಲ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನಿತರ ಉದ್ದೇಶಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಅಕ್ಟೋಬರ್ ಅಂತ್ಯದ ವರೆಗೆ ಮಂಗಳೂರಿಗೆ ಬರುವಂತಿಲ್ಲ. ಈ ಬಗ್ಗೆ ಈಗಾಗಲೇ ಕೇರಳದಲ್ಲಿದ್ದವರಿಗೆ ಆಯಾ ಶಿಕ್ಷಣ ಸಂಸ್ಥೆಗಳು ಸೂಚನೆ

ಇನ್ನೆರಡು ತಿಂಗಳು ದೇವರ ನಾಡಿಗೆ ಹೋಗುವಂತಿಲ್ಲ| ಕೇರಳಕ್ಕೆ ಹೋಗುವುದು, ಬರುವುದು ನಿರ್ಬಂಧಿಸಿ ದ.ಕ ಡಿಸಿ ಆದೇಶ| Read More »