Editor

ಪುಲ್ವಾಮಾ: ಉಗ್ರರೊಂದಿಗೆ ಸೆಣಸಾಡುತ್ತಾ ರಾಜ್ಯದ ಯೋಧ ಹುತಾತ್ಮ

ಜಮ್ಮು ಕಾಶ್ಮೀರ: ಪುಲ್ವಾಮಾದಲ್ಲಿ ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರುನಾಡಿನ ಯೋಧ ಹುತಾತ್ಮರಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ (44) ಅವರು ವೀರಮರಣ ಹೊಂದಿದವರು. ನಿನ್ನೆ ಮುಂಜಾನೆ ಮೂರು ಗಂಟೆ ಸುಮಾರಿಗೆ ರಜಪೂತ್‌- ಪೆರೆಂಟ್‌ ಯುನಿಟ್‌- 38 ಅಸಾಲ್ಟ್‌ ಎಂಜಿನಿಯರ್‌ ರೆಜಿಮೆಂಟ್‌ ಯೋಧರು ಪುಲ್ವಾಮಾದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಉಗ್ರರು ಇವರಿಗೆ ಎದುರಾಗಿದ್ದು […]

ಪುಲ್ವಾಮಾ: ಉಗ್ರರೊಂದಿಗೆ ಸೆಣಸಾಡುತ್ತಾ ರಾಜ್ಯದ ಯೋಧ ಹುತಾತ್ಮ Read More »

ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಹಸುವಿಗೆ ಸೀಮಂತ ಕಾರ್ಯ | ಇಲ್ಲಿಯ ವಿಶೇಷತೆ ನೀವೆ ಓದಿ

ಗದಗ: ಚೊಚ್ಚಲು ಗರ್ಭಿಣಿಯರಿಗೆ ಆರತಿ ಬೆಳಗಿ, ಹೂ ಗಳಿಂದ ಅಲಂಕರಿಸಿ, ಬಾಗಿನ ತುಂಬಿ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಗೋವಿಗೂ ಸೀಮಂತ ಮಾಡಲಾಗಿದೆ. ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರ ಮನೆಯಲ್ಲಿ ಸಾಕಿದ್ದ ಗೌರಿ ಎಂಬ ಹಸುವಿಗೆ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ. ಮನೆಯ ಮಗಳಿಗೆ ತವರು ಮನೆಯವರು ಬಳುವಳಿಯಾಗಿ ಕರು ನೀಡಿದ್ದರು. ಸದ್ಯ 7 ವರ್ಷದ ನಂತರ ಗೌರಿ ಗರ್ಭ ಧರಿಸಿರುವುದರಿಂದ ಮನೆ ಮಂದಿಗೆಲ್ಲಾ ಸಂತಸ ತಂದಿದೆ.

ಮನೆಯ ಮಗಳಿಗೆ ಮಾಡುವಂತೆ ಶಾಸ್ತ್ರೋಕ್ತವಾಗಿ ಹಸುವಿಗೆ ಸೀಮಂತ ಕಾರ್ಯ | ಇಲ್ಲಿಯ ವಿಶೇಷತೆ ನೀವೆ ಓದಿ Read More »

ಕನ್ನಡಿಗ ಯೋಧ ದಿಲ್ಲಿಯಲ್ಲಿ ಮೃತ್ಯು

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದಿಲ್ಲಿಯ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಣ್ಣೂರು ಕೇರಿ ಗ್ರಾಮದ ಸಿರ್‌ಪಿಎಫ್ ಯೋಧ ಶಿವಕುಮಾರ್ (35) ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಸೇವೆಗೆ ರಜೆ ಹಾಕಿ ಗುರುವಾರ ರಾತ್ರಿ ಊರಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ದಿಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ ಎನ್ನಲಾಗಿದೆ. ಸಾವಿಗೆ ನಿಖರ ಕಾರಣ ಕಾರಣ ತಿಳಿದು ಬಂದಿಲ್ಲ. ಯೋಧನ ಪಾರ್ಥಿವ ಶರೀರವನ್ನು ಇಂದು

ಕನ್ನಡಿಗ ಯೋಧ ದಿಲ್ಲಿಯಲ್ಲಿ ಮೃತ್ಯು Read More »

ಅಸಹಾಯಕ ವೃದ್ಧ ದಂಪತಿಗೆ ಕಿಚ್ಚ ಸುದೀಪ್ ನೆರವು

ಬೆಂಗಳೂರು: ಕೊರೋನ ಹಾವಳಿಯಿಂದ ತತ್ತರಿಸಿದ ಹಾಗೂ ಸಂಕಷ್ಟದಲ್ಲಿ ಸಿಲುಕಿದ ಹಲವರಿಗೆ ತನ್ನ ಚಾರಿಟೇಬಲ್ ಸೊಸೈಟಿಯಿಂದ ಅನೇಕರಿಗೆ ಆಸರೆಯಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್’ರವರು ಇದೀಗ ಮತ್ತೊಂದು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ. ದೊಡ್ಡಬಳ್ಳಾಪುರದ ಕಮಲಮ್ಮಾ (70) ಹಾಗೂ ಶ್ರೀನಿವಾಸ (78 ) ಎಂಬ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗನಿಗೆ ಕಾಲಿಲ್ಲದ ಕಾರಣ ಆತನಿಗೆ ಪೋಷಕರನ್ನು ನೋಡಿಕೊಳ್ಳಲಾಗುತ್ತಿಲ್ಲ. ಇನ್ನೋರ್ವ ಮಗ ಮೈಸೂರಿನಲ್ಲಿ ವಾಸವಿದ್ದು ,ಅಪ್ಪ ಅಮ್ಮನಿಗೆ ಎಳ್ಳು ನೀರು ಬಿಟ್ಟು ಕೈ ತೊಳೆದುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಇದ್ದ ಆಸ್ತಿಯನ್ನೆಲ್ಲಾ

ಅಸಹಾಯಕ ವೃದ್ಧ ದಂಪತಿಗೆ ಕಿಚ್ಚ ಸುದೀಪ್ ನೆರವು Read More »

ಸುಳ್ಯ ಮಾಜಿ ಜಿ. ಪಂ. ಸದಸ್ಯ ಕೆಎಸ್ ದೇವರಾಜ್ ನಿಧನ

ಸುಳ್ಯ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆಎಸ್ ದೇವರಾಜ್ (55) ಅವರು ಇಂದು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಸುಬ್ರಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದ ಅವರು ಏನೆಕಲ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿದ್ದರು.

ಸುಳ್ಯ ಮಾಜಿ ಜಿ. ಪಂ. ಸದಸ್ಯ ಕೆಎಸ್ ದೇವರಾಜ್ ನಿಧನ Read More »

ಸುಳ್ಯದ ನಾಗರಿಕರೇ ಎಚ್ಚರ | ವ್ಯಾಕ್ಸಿನ್ ಸೆಂಟರ್’ನಲ್ಲಿ ರಾಜಕಾರಣಿಗಳದ್ದೇ ದರ್ಬಾರ್ | ಅಳಲು ತೋಡಿಕೊಂಡ ಜನಸಾಮಾನ್ಯರು

ಸುಳ್ಯ: ಸುಳ್ಯದ ಪುರಭವನದ ಕೋವಿಡ್ ಲಸಿಕಾ ಕೇಂದ್ರದಲ್ಲಿ ರಾಜಕಾರಣಿಗಳು ದರ್ಬಾರ್ ನಡೆಸುತ್ತಿದ್ದಾರೆ. ಆಗಾಗ ತಮ್ಮ ಪ್ರಭಾವ ಬಳಸಿ ತಮ್ಮ ಜೊತೆ ಬಂದವರಿಗೆ ಲಸಿಕೆ ಹಾಕಿಸುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಅಳಲು ತೋಡಿಕೊಂಡಿದ್ದಾರೆ. ಇಂದು ಶುಕ್ರವಾರ ನಗರದ ಪುರಭನದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ನಾಗರಿಕರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಜನಸಾಮಾನ್ಯ ರೊಂದಿಗೆ ಎಚ್ಚರಿಕೆಯಿಂದ ಇರುವಂತೆ ಆಗಾಗ ಸೂಚಿಸಿದ್ದಾರೆ. ಆದರೆ ಇದರ ನಡುವೆ ಆಗಾಗ ಒಬ್ಬೊಬ್ಬ ರಾಜಕಾರಣಿಗಳು ಇತರರನ್ನು ಕರೆದುಕೊಂಡು ಬಂದು ಬೆಳಗ್ಗಿನಿಂದ ಕಾಯುತ್ತಿರುವ ಜನಸಾಮಾನ್ಯರನ್ನು

ಸುಳ್ಯದ ನಾಗರಿಕರೇ ಎಚ್ಚರ | ವ್ಯಾಕ್ಸಿನ್ ಸೆಂಟರ್’ನಲ್ಲಿ ರಾಜಕಾರಣಿಗಳದ್ದೇ ದರ್ಬಾರ್ | ಅಳಲು ತೋಡಿಕೊಂಡ ಜನಸಾಮಾನ್ಯರು Read More »

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಮಾನವೀಯ ಘಟನೆ | ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ

ಮಂಗಳೂರು: ನಗರದಲ್ಲಿ ಬೀದಿ ನಾಯಿಗಳ ಮೇಲೆ ಮಾನವನ ಅಟ್ಟಹಾಸ ಮುಂದುವರೆದಿದ್ದು, ನಾಯಿ ಒಂದಕ್ಕೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಗರದ ಶಿವಭಾಗ್ ನ ಆಭರಣ ಜುವೆಲ್ಲರ್ಸ್ ಹಿಂಭಾಗ ಇಂದು ಮುಂಜಾನೆ ನಾಯಿ ಮೃತದೇಹ ಪತ್ತೆಯಾಗಿದೆ. ಅನಿಮಲ್ ಕೇರ್ ಟ್ರಸ್ಟ್ ಕಾರ್ಯಕರ್ತರು ಅದನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿ ದೇಹದೊಳಗೆ ಬುಲೆಟ್ ಪತ್ತೆಯಾಗಿದೆ. ಶಿವಭಾಗ್ ಪ್ರದೇಶದಲ್ಲಿ ನಿತ್ಯ ಓಡಾಡುತ್ತಿದ್ದ ಬೀದಿನಾಯಿ ಇದಾಗಿದೆ. ನಾಯಿಗೆ ಗುಂಡಿಕ್ಕಿ ಕೊಂದ ವಿಷಯ

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಮಾನವೀಯ ಘಟನೆ | ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿ Read More »

ಮಾವನೊಂದಿಗೆ ಮಂಚ ಹತ್ತುವಂತೆ ಅತ್ತೆ, ಗಂಡನ ಒತ್ತಾಯ | ಇದು ‘ಲವ್’ಜಿಹಾದ್ ಗೆ ಒಳಗಾಗಿದ್ದ ಯುವತಿಯ ಅಳಲು

ಶ್ರೀನಗರ: ಮಾವನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ನನ್ನ ಗಂಡ ಮತ್ತು ಗಂಡನ ತಾಯಿ ಒತ್ತಾಯಿಸುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿಕೊಂಡು ಮಹಿಳೆಯೊಬ್ಬಳು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾರೆ. ಆಕೆ ಹಿಂದೂ ಯುವತಿ. ಆತ ಮುಸಲ್ಮಾನ್ ಯುವಕ. ಇಬ್ಬರು ಶಾಲಾ ದಿನಗಳಲ್ಲಿ ಸಹಪಾಠಿಗಳು. ಕೊನೆಗೆ ಯುವತಿ ಜಲಂಧರ್ ನ ಆಸ್ಪತ್ರೆಯಲ್ಲಿ ಯುವತಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅದಲ್ಲದೆ ಇಬ್ಬರು ಉತ್ತರಪ್ರದೇಶದ ಮಸೀದಿಯೊಂದರಲ್ಲಿ ವಿವಾಹವಾಗಿದ್ದಾರೆ. ಬಹಳ ಸಂತೋಷದಿಂದ ಯುವತಿ ಗಂಡನ ಮನೆಯ ಹೊಸ್ತಿಲು

ಮಾವನೊಂದಿಗೆ ಮಂಚ ಹತ್ತುವಂತೆ ಅತ್ತೆ, ಗಂಡನ ಒತ್ತಾಯ | ಇದು ‘ಲವ್’ಜಿಹಾದ್ ಗೆ ಒಳಗಾಗಿದ್ದ ಯುವತಿಯ ಅಳಲು Read More »

ಮಡಿಕೇರಿ: ಜಿಲ್ಲೆಗೆ ಆಗಮಿಸುತ್ತಿರುವ ಅಸ್ಸಾಂ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ | ನಿಯಮ ಮೀರಿ ಪ್ರವಾಸಿಗರಿಗೆ ಆಶ್ರಯ ನೀಡಿದರೆ ಕಠಿಣ ಕ್ರಮ: ಶಾಸಕ ಅಪ್ಪಚ್ಚು ರಂಜನ್

ಮಡಿಕೇರಿ: ಕೊಡಗಿನಲ್ಲಿ ಕಾರ್ಮಿಕರ ಕೊರತೆಯಿದೆ. ಕಾರ್ಮಿಕರ ಅಗತ್ಯವಿದೆ ಎಂದು ತೋಟದ ಮಾಲೀಕರು ಹೇಳುತ್ತಿದ್ದಾರೆ. ಆದ್ದರಿಂದ ಅಸ್ಸಾಂ ನಿಂದ ಬರುತ್ತಿರುವ ಕಾರ್ಮಿಕರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸಾಂ ಕಾರ್ಮಿಕರು ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಆದರೆ ಕಾರ್ಮಿಕರ ಅಗತ್ಯತೆಯ ಬಗ್ಗೆ ತೋಟದ ಮಾಲೀಕರು ಗಮನ ಸೆಳೆದಿದ್ದಾರೆ. ಬಂದ ಕಾರ್ಮಿಕರನ್ನು ಕ್ವಾರೆಂಟೈನ್ ಒಳಪಡಿಸುವುದಲ್ಲದೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದರು. ಬೇರೆ ಜಿಲ್ಲೆಗಳಲ್ಲಿ ನಡೆಯುತ್ತಿರುವ

ಮಡಿಕೇರಿ: ಜಿಲ್ಲೆಗೆ ಆಗಮಿಸುತ್ತಿರುವ ಅಸ್ಸಾಂ ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ | ನಿಯಮ ಮೀರಿ ಪ್ರವಾಸಿಗರಿಗೆ ಆಶ್ರಯ ನೀಡಿದರೆ ಕಠಿಣ ಕ್ರಮ: ಶಾಸಕ ಅಪ್ಪಚ್ಚು ರಂಜನ್ Read More »

ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಲು ಒತ್ತಾಯ | ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ

ಬೆಂಗಳೂರು: ಹಿಂದಿನ ಸೆಮಿಸ್ಟರ್’ನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್ ಗೆ ತೇರ್ಗಡೆ ಗೊಳಿಸುವಂತೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಬೆಸ ಸೆಮಿಸ್ಟರ್’ ಸೆಮಿಸ್ಟರ್ ಪರೀಕ್ಷೆಗಳು ಕೋವಿಡ್ ಕಾರಣದಿಂದ ಬಾಕಿಯಾಗಿತ್ತು. ಸಂಪೂರ್ಣ ತರಗತಿಗಳು ನಡೆದಿರಲಿಲ್ಲ. ಅದೆಲ್ಲದೆ ಇದೀಗ ಮುಂದಿನ ಸೆಮಿಸ್ಟರ್’ನ ತರಗತಿಗಳನ್ನು ಆನ್’ಲೈನ್’ನಲ್ಲಿ ಈಗಾಗಲೇ ಆರಂಭಿಸಲಾಗಿದೆ. ಅದಾಗ್ಯೂ ಹಿಂದಿನ ಸೆಮಿಸ್ಟರ್’ನ ಪರೀಕ್ಷೆಯನ್ನು, ತರಗತಿಗಳು ಆರಂಭವಾದ ನಂತರ ನಡೆಸುವುದಾಗಿ ವಿಶ್ವವಿದ್ಯಾನಿಲಯಗಳು ಹೇಳುತ್ತಿವೆ. ಈ ಬಗ್ಗೆ ಹಿಂದಿನ ಸೆಮಿಸ್ಟರ್

ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಗೊಳಿಸಲು ಒತ್ತಾಯ | ನಾಳೆ ರಾಜ್ಯಾದ್ಯಂತ ಆನ್ಲೈನ್ ತರಗತಿ ಬಹಿಷ್ಕಾರಕ್ಕೆ ಕರೆ Read More »