Ad Widget .

ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ| ಈ ಸಂಬಂಧ ಹೋರಾಟ ಮಾಡಲು ಕರವೇ ಚಿಂತನೆ

ಸಮಗ್ರ ನ್ಯೂಸ್:ಕರ್ನಾಟಕ ರಕ್ಷಣಾ ವೇದಿಕೆ ನಾಮಫಲಕ ವಿಚಾರವಾಗಿ ಡಿಸೆಂಬರ್​ 27 ರಂದು ಹೋರಾಟ ಮಾಡಿ, ಫೆಬ್ರವರಿ 28ರ ವರೆಗೆ ಗಡುವು ನೀಡಿದ್ದರ ಪರಿಣಾಮ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡ ಕಡ್ಡಾಯ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಪರಿಣಾಮವಾಗಿ ಈಗ ಬೆಂಗಳೂರು ಕನ್ನಡಮಯ ಆಗುತ್ತಿದೆ. ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೂ ಉದ್ಯೋಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಎಲ್ಲ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು. ಈ ಸಂಬಂಧ ಹೋರಾಟ ಮಾಡಲು ಚಿಂತಿಸಿದ್ದೇವೆ. ನಾಳೆ ನಡೆಯುವ ಕರವೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು

Ad Widget . Ad Widget . Ad Widget .

ಇನ್ನೂ ಬೆಳಗಾವಿ ಜಿಲ್ಲೆಯಲ್ಲೂ ಸಂಪೂರ್ಣವಾಗಿ ಕನ್ನಡಮಯ ಆಗಬೇಕು. ನೀವು ಯಾರು ಬೇಕಾದರೂ ಸುಪ್ರೀಂಕೋರ್ಟ್​​ಗೆ ಅರ್ಜಿ ಹಾಕಲಿ. ಅದರಿಂದ ನಮಗೇನೂ ಆಗಬೇಕಿಲ್ಲ, ಆದರೆ ಕನ್ನಡ ಬೋರ್ಡ್ ಹಾಕಬೇಕು. ಫೆಬ್ರವರಿ 28ರ ಬಳಿಕವೂ ಕನ್ನಡ ಬಳಸದಿದ್ದರೆ ಮತ್ತೊಮ್ಮೆ ಗುಡುಗು-ಸಿಡಿಲು ಆಗಲಿದೆ ಎಂದು ಎಚ್ಚರಿಕೆ ನೀಡಿದರು.

Leave a Comment

Your email address will not be published. Required fields are marked *