Ad Widget .

“ನನ್ನ ಮೆಸೇಜ್ ಗೆ ಉತ್ತರಿಸಿ” ಟ್ರೋಲ್ ಆಯ್ತು‌ ಲಲಿತ್ ಮೋದಿ ಟ್ವೀಟ್

ಸಮಗ್ರ ನ್ಯೂಸ್: ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಲು ಪ್ರಾರಂಭವಾಗಿದೆ.

Ad Widget . Ad Widget .

“ಸುಶ್ಮಿತಾ ಸೇನ್​ ನನ್ನ ಎಸ್​ಎಂಎಸ್​ಗೆ ಉತ್ತರಿಸಿ’ ಎಂದು ಲಲಿತ್​ ಮೋದಿ ಮಾಡಿದ್ದ ಟ್ವೀಟ್​ ಈಗ ಸದ್ದು ಮಾಡುತ್ತಿದೆ.

Ad Widget . Ad Widget .

ಆ ಟ್ವೀಟ್​ ಮಾಡಿದ್ದು 2013ರಲ್ಲಿ. ಆದರೆ, ಈಗ ಹಾಸ್ಯಮಯ ಪ್ರತಿಕ್ರಿಯೆಗಳಿಗೆ ಆ ಒಂದು ಸಣ್ಣ ಪೋಸ್ಟ್​ ಕಾರಣವಾಗಿದೆ.

ಜುಲೈ 14ರಂದು ಸಾಮಾಜಿಕ ಮಾಧ್ಯಮ ಪೋಸ್ಟ್​ಗಳಲ್ಲಿ ಲಲಿತ್​ ಮೋದಿ ಅವರು ತಮ್ಮ “ಬೆಟರ್​ ಹಾಫ್’ ಸುಶ್ಮಿತಾ ಸೇನ್​ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದರು. ಅವರ ರಜೆಯ ಮೂಡ್​ನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಲಲಿತ್​ ಮೋದಿ ಅವರು 2013ರಲ್ಲಿ ಸುಶ್ಮಿತಾಗೆ ಪೋಸ್ಟ್​ ಮಾಡಿದ ನಿರ್ದಿಷ್ಟ ಟ್ವೀಟ್​ ಹಿಂದಿನ ಕಥೆಯೂ ಸ್ವಾರಸ್ಯಕರ. ಈಗ ಟ್ರೆಂಡಿಂಗ್​ ಆಗಿರುವ ಲಲಿತ್​ ಮೋದಿಯ “ನನ್ನ ಎಸ್​ಎಂಎಸ್ ಗೆ​ ಉತ್ತರಿಸಿ’ ಎಂಬ ಟ್ವೀಟ್​ ಮೀಮ್​ಗಳು ಮತ್ತು ಜೋಕ್​ಗಳಿಗಾಗಿ ಬಳಕೆಯಾಗಿದೆ.

Leave a Comment

Your email address will not be published. Required fields are marked *